Advertisement

Tag: ಅಂಕಣ

ನಿಯಂತ್ರಿಸುವ ಬುದ್ಧಿಯನ್ನು ನಿಯಂತ್ರಿಸೋಣವೇ?: ಮಾಲತಿ ಶಶಿಧರ್‌ ಅಂಕಣ

ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಈಗ ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ?
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”

Read More

ಅನುಬಂಧವೊಂದು ಕೊರಳ ಉರುಳಾಗುವ ಹೊತ್ತು: ಮಾಲತಿ ಶಶಿಧರ್‌ ಅಂಕಣ

ಮಳೆ ನಿಂತ ಮಾರನೇ ದಿನದ ಸ್ವರ್ಗವೀಗ ಅಜ್ಜಿಯ ಕತೆಯಲ್ಲಿ ಬರುತ್ತಿದ್ದ ನರಕದಂತೆ ಭಾಸವಾಗುತ್ತಿದೆ. ಸೂರ್ಯ ಮುಳುಗಿದ ಮೇಲೆ ಹನಿ ಬೀಳುವ ಸದ್ದಿಗೆ ಪುಳಕಗೊಳ್ಳುತ್ತಿದ್ದ ಹೃದಯ ಅಕ್ಕ ಪಕ್ಕದವರಿಗೂ ಕೇಳಿಬಿಡುವಂತೆ ಒಡೆದುಕೊಳ್ಳಲು ಶುರು ಮಾಡಿದೆ. ನಿದ್ದೆಯೇ ಇಲ್ಲದ ಅವಳಿಗೀಗ ಅಲಾರಾಂ ಅವಶ್ಯಕತೆಯಿಲ್ಲ. ಹೊರಗೆ ಕಾಲಿಟ್ಟರೆ ಮುದ ಗೊಳಿಸುತ್ತಿದ್ದ ಚಳಿ ಈಗ ಬೆನ್ನ ಮೂಳೆಯನ್ನು ಕೊರೆಯುತ್ತದೆ.
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”ಯಲ್ಲಿ ಹೊಸ ಬರಹ

Read More

ಗ್ಲೋಬಲ್-ಲೋಕಲ್ ಊರುಗಳ ಉಪಕಥೆಗಳು: ವಿನತೆ ಶರ್ಮ ಅಂಕಣ

ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಾವಿರ ಕಥೆಗಳ ಸಂಸಾರ: ಎಸ್‌. ನಾಗಶ್ರೀ ಅಜಯ್‌ ಅಂಕಣ

ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

Read More

ನೋವಿನಲ್ಲೂ ನಗುವುದ ಕಲೀಬೇಕು: ನಾಗಶ್ರೀ ಅಜಯ್‌ ಅಂಕಣ

“ಕೆಲವೊಮ್ಮೆ ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ