Advertisement

Tag: ಅಬ್ದುಲ್ ರಶೀದ್

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕಥೆ

ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್‌ ರಶೀದ್‌ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”

Read More

ತೀರಿಹೋದ ತಿರುಮಲೇಶರ ಕುರಿತು

ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ.
ಕೆ.ವಿ. ತಿರುಮಲೇಶರ ಕುರಿತು ಅಬ್ದುಲ್‌ ರಶೀದ್‌ ಬರಹ ನಿಮ್ಮ ಓದಿಗೆ

Read More

ಮೂವತ್ತು ವರ್ಷಗಳ ಹಿಂದೆ ಸಾರಾ ಉಮ್ಮಾ ಜೊತೆಗೆ

ನಾಲ್ಕು ದಶಕಗಳ ಹಿಂದೆ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ಬರೆಯಲು ಶುರು ಮಾಡಿದ ಸಾರಾ ಅಬೂಬಕ್ಕರ್ ಕನ್ನಡಕ್ಕೆ ಸಂಭವಿಸಿದ ಒಂದು ಅಚ್ಚರಿ. ಬಹುಶಃ ಕನ್ನಡಕ್ಕೆ ಸಂಭವಿಸಿದ ಇನ್ನೊಂದು ಅಚ್ಚರಿಯಾದ ಪಿ. ಲಂಕೇಶರು ಇಲ್ಲದಿದ್ದರೆ ಸಾರಾ ಕನ್ನಡದಲ್ಲಿ ಬರೆಯುತ್ತಲೇ ಇರಲಿಲ್ಲವೇನೋ.ಸುಮಾರು ಮೂವತ್ತು  ವರ್ಷಗಳ ಹಿಂದೆ ಆಗ ಇನ್ನೂ ಮೂವತ್ತರ ಹರೆಯದ ತರುಣನಾಗಿದ್ದ ಕನ್ನಡದ ಕಥೆಗಾರ ಅಬ್ದುಲ್ ರಶೀದ್ ಲಂಕೇಶ್ ಪತ್ರಿಕೆಗಾಗಿ ಸಾರಾ ಅವರೊಡನೆ ನಡೆಸಿದ್ದ ಮಾತುಕತೆಯ ಪಠ್ಯ ಇಲ್ಲಿದೆ

Read More

ಏಳು ಪುಣ್ಯದ ಕೆರೆಗಳನ್ನು ಕೊಟ್ಟವರು ತೀರಿಹೋದರು

ನೋಡಲು ಬಿಕಾರಿಯಂತೆ ತೋರುವ ಆದರೆ ಮಾತನಾಡಲು ತೊಡಗಿದರೆ ಸಂತನಂತೆ ಕಾಣುವ ಕಾಮೇಗೌಡರು ಒಣ ಪ್ರದೇಶವಾದ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದ ಪಾದದಲ್ಲಿ ಕೈಯ್ಯಾರೆ ತೋಡಿರುವ ಈ ಏಳು ಕೆರೆಗಳು ಕರ್ಮಯೋಗಿಯೊಬ್ಬ ನಲವತ್ತು ವರ್ಷಗಳಿಂದ ನಡೆಸಿರುವ ಕಾಯಕದಂತೆ ಬೆಳಗುತ್ತಿವೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರು ತಾವು ಕಟ್ಟಿದ ಹದಿನಾರು ಕೆರೆಗಳನ್ನು ಇಲ್ಲೇ ಬಿಟ್ಟು ತಾವು ಮಾತ್ರ ಇಂದು ಬೆಳಗ್ಗೆ ತೀರಿಹೋದರು. ಅವರ ಕುರಿತು ಅಬ್ದುಲ್ ರಶೀದ್ ಬರೆದಿದ್ದ ವ್ಯಕ್ತಿಚಿತ್ರ ನಿಮ್ಮ ಓದಿಗೆ

Read More

ಮುಗ್ಧತೆಯನ್ನೂ ತಾತ್ವಿಕತೆಯನ್ನೂ ಪೋಣಿಸಿಕೊಂಡ ರಶೀದ್‍ರ ಕತೆಗಳು

ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ  ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದಿದೆ. ಅವರು ಹಾಗೆ ಬರೆದಂತಹ ಬರಹವು ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು. ಎಂತಹ ಸಂದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಸುಮತಿ ಮುದ್ದೇನಹಳ್ಳಿ ಬರಹ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ