ಇನ್ಸ್ಬ್ರುಕ್ ಎಂಬ ಮಾಯಾಲೋಕ
ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ!
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ