ಮಾನವೀಯ ಮೌಲ್ಯಗಳ ಪ್ರಯೋಗಶೀಲ ಕಾವ್ಯ: ಪ್ರಶಾಂತ್ ಬೆಳತೂರು
ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ.
ಎಂ. ಜವರಾಜ್ ಕಥನ ಕಾವ್ಯ “ಮೆಟ್ಟು ಹೇಳಿದ ಕಥಾ ಪ್ರಸಂಗ”ದ ಕುರಿತು ಪ್ರಶಾಂತ್ ಬೆಳತೂರು ಬರಹ