ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ
“ನಾವೋ…
ಮಹಾತಾಯ ಗರ್ಭದಲ್ಲಿ
ಎಂದೋ ಉದುರಿ ಬಿದ್ದು
ಅವಳ ನಿರ್ಲಕ್ಷ್ಯಕ್ಕೆ ಒಳಪಟ್ಟ
ಅಸ್ಪೃಶ್ಯ ಮಕ್ಕಳು
ಮುಟ್ಟಲಾರೆವು
ಅವಳ ಮೊಲೆ ಹಾಲನ್ನು
ಎಲ್ಲರಂತೆ ಆಡಲಾಗದ
ಎಲ್ಲರಂತೆ ಕುಣಿಯಲಾಗದ
ಧರೆಯ ಹೆಳವರು
ಭೂತ ವರ್ತಮಾನದ ಹಾದಿ
ಅನಾದಿಗಳನ್ನು ಕಾಣದೆ
ಭವಿಷ್ಯದ ಹೆಜ್ಜೆ ಗುರುತುಗಳನ್ನು
ಮೂಡಿಸಲು
ಅಜ್ಜ ಬಿಟ್ಟು ಹೋದ
ಊರುಗೋಲನ್ನೇ ನಂಬಿ
ಕುಂತಲ್ಲೇ ಕೂತಿದ್ದೇವೆ…!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ