ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ: ಸುಧಾ ಆಡುಕಳ ಮಾತುಗಳು
ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.
ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ