Advertisement

Tag: ಓ ಎಲ್ ನಾಗಭೂಷಣ ಸ್ವಾಮಿ

‘ದಾರಿ ತಪ್ಪಿಸುವ ಗಿಡʼಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ

Read More

ಅಪರಾಧ ಮತ್ತು ಶಿಕ್ಷೆ: ಇದು ಯಾವ ಪಾಪಕ್ಕೆ…?

ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು.
. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಶ್ರೀಧರ ಬಳಗಾರ ಕಾದಂಬರಿಗೆ ಓ. ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…”

Read More

ಕುಂವೀಯವರ “ನಿಜಲಿಂಗ” ಕಾದಂಬರಿಯ ಕುರಿತು ಓ.ಎಲ್.ನಾಗಭೂಷಣ ಸ್ವಾಮಿ

“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’”

Read More

ನಮ್ಮ ಆತ್ಮ ಒರಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ಆತ್ಮ ಬೇಕು, ನಮ್ಮನ್ನು ಬೆಚ್ಚಗಿಡುವುದಕ್ಕೆ ಇನ್ನೊಂದು ಮೈಯಿ ಬೇಕು

“ಹೌದು, ನಿನಗೆ ಮರುಳಾಗಿದ್ದೇನೆ. ಈಗಲೂ. ನನ್ನೊಳಗೆ ಇಷ್ಟು ತೀವ್ರವಾದ ದೇಹಭಾವವನ್ನು ಯಾರೂ ಮೂಡಿಸಿಲ್ಲ. ನಿನ್ನ ಸಂಬಂಧ ಕತ್ತರಿಸಿಕೊಂಡೆ. ಯಾಕೆಗೊತ್ತಾ. ಸುಮ್ಮನೆ ಹೀಗೆಬಂದು ಹಾಗೆ ಹೋಗುವ ಭ್ರಮೆ, ಮರುಳು ನನಗಿಷ್ಟವಿಲ್ಲ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ