Advertisement

Tag: ಕವಿತೆ

ಮನೆ ಮತ್ತು ಮನದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ದಿತಿ ರೋನೆನ್‌ರ ಕವನಗಳಲ್ಲಿ ಅವರ ಎಲ್ಲಾ ಆಸ್ಥೆಗಳ, ನಂಬಿಕೆಗಳ, ಕಾಳಜಿಗಳ ಉದಾಹರಣೆಗಳನ್ನು ಕಾಣಬಹುದು. ಹಿಟ್ಲರ್‌ನ ಕಾಲದ ಜರ್ಮನಿ ಯಹೂದಿಗಳ ವಿರುದ್ಧ ನಡೆಸಿದ ಹತ್ಯಾಕಾಂಡದ ನೆನಪುಗಳು ಗಾಯಗಳು ಎಂದೂ ಮರೆಯಾಗಲ್ಲ. ಈ ಹತ್ಯಾಕಾಂಡದಿಂದ ಬದುಕುಳಿದವರ ಮಗಳಾಗಿ ದಿತಿ ರೋನೆನ್‌ ಅವರು ಇದರ ಬಗ್ಗೆ ಬಹು ಮಾರ್ಮಿಕವಾಗಿ ಬರೆಯುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸಮಕಾಲೀನ ತಲ್ಲಣಗಳಿಗೆ ಹೆಗಲುಕೊಡುವ ಕವಿತೆಗಳು

ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್‌ ಮ್ಯಾಸರ್‌ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ

Read More

ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…

‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

Read More

ಶಶಿ ತರೀಕೆರೆ ಕವಿತೆ: ವೈಲ್ಡ್‌ ಅಂಡ್‌ ವಿಯರ್ಡ್

ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು

Read More

ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

“ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ”-‌ ಎಚ್.ಆರ್.ರಮೇಶ್ ಬರೆದ ಈ ದಿನದ ಕವಿತೆ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು.…

Read More

ಬರಹ ಭಂಡಾರ