Advertisement

Tag: ಕಾವ್ಯ

ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು…..: ದೇವರಾಜ್‌ ಹುಣಸಿಕಟ್ಟಿ ಬರಹ

ಈ ಲೋಕದ ಹಂಗುಗಳು, ದರ್ದುಗಳು ಇರ್ಶೆಯನ್ನೇ ಹಾಸಿ ಹೊದ್ದು ಮಲಗಿವೆ. ಪ್ರೇಮಿಗಳ ಲೆಕ್ಕದಲ್ಲಂತು ಥೇಟ್ ರಾಕ್ಷಸಿ ಸೊರೂಪ… ಇಡೀ ಇತಿಹಾಸದುದ್ದಕ್ಕೂ ಇದು ದಿಟವಾಗಿದೆ… ಇಲ್ಲಾ ಅಂದ್ರೆ ರೋಮಿಯೋ ಜೂಲಿಯಟ್, ಮಮತಾಜ್ ಷಹ ಜಹಾನ್ ಇನ್ನೂ ಅದೆಷ್ಟೋ ಕಥನಗಳು ರೂಪ ಪಡೆದಿರುತ್ತಿರಲಿಲ್ಲ…
ಅಮೃತಾ ಪ್ರೀತಮ್ ಒಂದಷ್ಟು ಕವಿತೆಗಳನ್ನು “ಬಿಸಿಲಿನ ಅದೆಷ್ಟೋ ತುಣುಕುಗಳು” ಎಂಬ ಸಂಕಲನದಡಿ ರಶ್ಮಿ ಎಸ್ ಕನ್ನಡಕ್ಕೆ ಅನುವಾದಿಸಿದ್ದು, ಈ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ

Read More

ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್.‌ ಅನಂತಮೂರ್ತಿ ಮುನ್ನುಡಿ

Read More

ಕಾವ್ಯಕುತೂಹಲ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ಕನ್ನಡಿಗೆ ಗೊತ್ತಿಲ್ಲ. ಕಡಲಿಗೆ ಗೊತ್ತು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಪಂಜರದ ಹಕ್ಕಿ ಹಾಡುವುದು ಯಾಕೆ!: ಚೈತ್ರಾ ಶಿವಯೋಗಿಮಠ ಸರಣಿ

ತಾಯಿ ಶ್ರೀಮಂತೆ, ಮೈ ತುಂಬಾ ವಜ್ರದೊಡವೆ, ಬಂಗಲೆ ಕಾರು ಇದ್ದರೂ ಸಹಿತ ಮಾಯಾ ಎಂತಹ ಸ್ವಾಭಿಮಾನಿ ಎಂದರೆ ಅಮ್ಮನಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಅಮ್ಮನ ಕೈಯಡುಗೆ ಉಂಡು ಅವಳೊಂದಿಗೆ ಒಂದಿಷ್ಟು ಆಪ್ತ ಸಮಯ ಕಳೆಯುವುದನ್ನು ಬಿಟ್ಟರೆ ತಾಯಿಯಿಂದ ಏನನ್ನೂ ಅಪೇಕ್ಷಿಸಲಿಲ್ಲ ಮಾಯಾ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ