Advertisement

Tag: ಕೆಂಡಸಂಪಿಗೆ

ಸೈನ್‌ ಹಾಕೋ ಫ್ರೆಂಡು…: ಎಚ್. ಗೋಪಾಲಕೃಷ್ಣ ಸರಣಿ

ಏನು ನೀನಿಲ್ಲಿ… ಅಂತ ಕೇಳಿದವರಿಗೆ ನನ್ನ ಹುಡುಕಾಟ ವಿವರಿಸಿ ವಿವರಿಸಿ ಬಾಯಿಪಾಠ ಆಗಿತ್ತು. ಬರೀ ಜಾಲಹಳ್ಳಿ ಅಂತ ಇದ್ದರೆ ಹುಡುಕೋದು ಅಸಾಧ್ಯ. ಆದರೂ ಇಂತ ಕಡೆ ಕೇಳು ಅಂತ ಅವರು ಸಿಕ್ಕಿದ ಜಾಗದಿಂದ ಒಂದು ಕಿಮೀ ದೂರ ಇರುವ ಮತ್ತೊಂದು ಜಾಗಕ್ಕೆ ಕಳಿಸಿ ಕೈ ತೊಳೆದವರು ಹೆಚ್ಚು. ಎಷ್ಟು ಉತ್ಸಾಹದಿಂದ ಬೆಳಿಗ್ಗೆ ಸೈಕಲ್ ಹತ್ತಿ ಹೊರಟಿದ್ದೆನೋ ಅಷ್ಟರ ನೂರು ಪಾಲು ಬೇಸರದಿಂದ ಮನೆಗೆ ವಾಪಸ್ ಆದೆ. ಅಣ್ಣನಿಗೆ ಈ ವಿಷಯ ವರದಿ ಮಾಡಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ

ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ “ಕರಕಲಾದ ಅನ್ನದಗುಳು” ನಿಮ್ಮ ಓದಿಗೆ

Read More

ಕಳೆದ ನೆನಪಿನ ಬಾನಿನ ಮೇಲಿನ ಮಿನುಗುವ ಭಾವಲೋಕ: ರಾಮ್ ಪ್ರಕಾಶ್ ರೈ ಕೆ ಸರಣಿ

ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮೆಯ್ಯಳಗನ್’ ಸಿನಿಮಾದ ವಿಶ್ಲೇಷಣೆ

Read More

ಎಂ.ಎಸ್.‌ ರಾಮಯ್ಯ ಕಾಲದ ಬೆಂಗಳೂರು: ಎಚ್. ಗೋಪಾಲಕೃಷ್ಣ ಸರಣಿ

ಈ ರಸ್ತೆಯಲ್ಲಿ ಮಿಲಿಟರಿಗೆ ಸಂಬಂಧಿಸಿದ ಕೆಲವು ಕಚೇರಿಗಳು ಇದ್ದವು. ಇಲ್ಲೂ ಸಹ ಒಂದು ರೈಲ್ವೇ ಗೇಟ್ ಇತ್ತು. ತೀರಾ ಈಚೆಗೆ ಒಂದು ಅಂಡರ್ ಪಾಸ್ ನಿರ್ಮಾಣವಾಗಿ ರೈಲು ಅದರ ತಳಗೆ ಹೋಗುತ್ತದೆ. ಮಿಲಿಟರಿ ಕಚೇರಿಗಳಿಗೆ ಸೇರಿದ ಹಾಗೆ ಒಂದು ಕಾರ್ಖಾನೆ ಇತ್ತು. ಅದರ ಹೆಸರು ಸಿಗ್ ಫಿಲ್ ಎಂದು. ಸಿಗರೇಟ್ ಫಿಲ್ಟರ್‌ನ ಕಂದು ಬಣ್ಣದ ಬೊಂಬೆ ಅದರ ಮುಖ್ಯ ಫಲಕದ ಮೇಲೆ ಬಿಂಬಿತವಾಗಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ