ಸವಾರಿ ಹೊರಟಳು ಮಳೆ ಮಹಾರಾಜ್ಞಿ
ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ. ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ
Read More