Advertisement

Tag: ಗುರುಪ್ರಸಾದ್ ಕಾಗಿನೆಲೆ

ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!

ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”

Read More

ಇಲ್ಲಿ ಎಲ್ಲವೂ ಸರಿ ಇದ್ಯಾ…?

ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಎರಡನೆಯ ಕಂತು ನಿಮ್ಮ ಓದಿಗಾಗಿ

Read More

ಗುರುಪ್ರಸಾದ್‌ ಕಾಗಿನೆಲೆ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್‌” ಇಂದಿನಿಂದ ಶುರು

‘ಥ್ಯಾಂಕ್ಸ್ ಗಿವಿಂಗ್’ ಈ ನೀಳ್ಗತೆಯನ್ನು ಬರೆದು ಸುಮಾರು ಎಂಟುವರ್ಷಗಳೇ ಆಗಿವೆ. ‘ಹಿಜಾಬ್’ ಕಾದಂಬರಿಯ ಬರವಣಿಗೆ ನನ್ನನ್ನು ಬಸವಳಿಸಿತ್ತು. ಕೆಲವೊಮ್ಮೆ ಏನೂ ಬರೆಯಲಾರೆ ಅನ್ನಿಸಿತ್ತು. ತಿಂಗಳುಗಟ್ಟಲೆ ಬರವಣಿಗೆಯನ್ನು ನಿಲ್ಲಿಸಿದ್ದೆ. ಅದನ್ನು ಮರು ಉದ್ದೀಪನಗೊಳಿಸಿಕೊಳ್ಳಲು ಅದಕ್ಕೆ ವಸ್ತು, ವಿಷಯ ಮತ್ತು ನಿರೂಪಣೆಯಲ್ಲಿ ಸಂಪೂರ್ಣ ಬೇರೆಯಾಗಿರುವುದನ್ನು ಬರೆಯಬೇಕೆನ್ನಿಸಿತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ಹೊಚ್ಚಹೊಸ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್” ಕೆಂಡಸಂಪಿಗೆಯಲ್ಲಿ ಕೆಲವು ಕಂತುಗಳಲ್ಲಿ ಪ್ರತಿ ಶನಿವಾರ ಪ್ರಕಟವಾಗಲಿದೆ

Read More

ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿಯ ತುಣುಕು

ಮಲೀಕ ಮಾತಾಡಲಿಲ್ಲ. ಆಕೆಯನ್ನು ಸೆಳೆದುಕೊಂಡ. ತುಟಿಗೆ ತುಟಿ ಸೇರಿಸಿದ. ಇವನ ತುಟಿಗಳ ಕೊಂಕೋ, ಆಕೆಯ ಕೃತಕ ತುಟಿ ಕಳೆದುಕೊಂಡಿದ್ದ ತೇವವೋ, ಮುತ್ತಿಗೊಂದು ಸತ್ವವಿರಲಿಲ್ಲ, ಸೆಳೆತವಿರಲಿಲ್ಲ. ಸ್ಥಿತಿಸ್ಥಾಪಕತ್ವ ಕಳೆದುಕೊಂಡ ರಬ್ಬರಿನ ಬೊಂಬೆಯ ತುಟಿಯನ್ನು ಚುಂಬಿಸಿದಂತಾಯಿತು, ಮಲೀಕನಿಗೆ.  ಆಕೆ ಮುತ್ತಿನಿಂದಲೇ ಮಲೀಕನನ್ನು ದೂರಸರಿಸುವುದಕ್ಕೆ ಪ್ರಯತ್ನಿಸಿದಳು. -ದೇಹ ಸೌಂದರ್ಯದ ಜಿಜ್ಞಾಸೆಯನ್ನು ಕುರಿತು ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿ ‘ಕಾಯಾ’ ದಿಂದ ಆಯ್ದ ಒಂದು ಅಧ್ಯಾಯ ನಿಮ್ಮ ಓದಿಗಾಗಿ. 

Read More
  • 1
  • 2

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸುತ್ತಾಡಿದ ದೇಶಗಳ ಒಳಗೂ-ಹೊರಗೂ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ…

Read More

ಬರಹ ಭಂಡಾರ