ಇಲ್ಲಿದ್ದಾನೆ… ನೀರಿನಲ್ಲಿ ಹೆಸರು ಕೆತ್ತಲಾದವನು
ಸಹೋದರನನ್ನು ಕಳೆದುಕೊಂಡ ಶೋಕ ದುಮ್ಮಾನ ಒಂದು ಕಡೆ, ಹೊಸ ಸ್ನೇಹ ಪ್ರೇಮಾಂಕುರಗಳ ಜೀವಸೆಲೆ ಇನ್ನೊಂದೆಡೆ, ಅವನ ಕವಿತೆಗಳು ಆ ಇಡೀ ವರ್ಷ ನೋವು ನಲಿವುಗಳ, ಖಿನ್ನತೆ ಉತ್ಸಾಹಗಳ ಉಯ್ಯಾಲೆಯಲ್ಲಿ ತೂಗಿ ತೇಲಿದವು. ವಾಸ್ತವದಲ್ಲಿ ಹರುಷ ಹಾಗು ವ್ಯಥೆಗಳು ಜೊತೆಜೊತೆಗೆ ಬದುಕಿ ಸಾಗುವುದನ್ನು ಪ್ರದರ್ಶಿಸಿದವು. ಬೇರೆಬೇರೆ ವಸ್ತುಗಳ ಪದ್ಯಗಳನ್ನು ಬೇರೆಬೇರೆ ಛಂಧಸ್ಸಿನಲ್ಲಿ ಬರೆಯುವ ಕೌಶಲ ಆತನಿಗಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕವಿ ಜಾನ್ ಕೀಟ್ಸ್ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ