ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ
“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”
Read More