Advertisement

Tag: ಡಾ. ಎಲ್.ಜಿ. ಮೀರಾ

ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ” ಆರಂಭ

ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ?
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ”

Read More

ಎಲ್.ಜಿ. ಮೀರಾ ಬರೆದ ಈ ಭಾನುವಾರದ ಕತೆ

ಮನೆಯಲ್ಲಿನ ಹೆಂಡತಿಯ ಮೇಲೆ ಮುನಿದಿದ್ದ ಮಾಮ ತನಗೆ ಇನ್ನೊಂದು ಮದುವೆ ಮಾಡಬೇಕೆಂದು ತನ್ನ ಹೆಂಡತಿಯನ್ನೇ ಬಲವಂತಿಸಿದ, ನಿರ್ಮಲತ್ತೆಯ ವಿದ್ಯಾರ್ಥಿನಿಯೊಬ್ಬರನ್ನು ಮದುವೆಯಾದ ಕೂಡ. ಅದೂ ಸರಿ ಹೋಗದೆ ಮೂರನೇ ಮದುವೆಯನ್ನೂ ಆಗಿ ಅವಳಿಗೆ ಒಂದು ಮಗುವನ್ನು ಕರುಣಿಸಿದ.
ಡಾ. ಎಲ್.ಜಿ. ಮೀರಾ ಬರೆದ ಈ ಭಾನುವಾರದ ಕತೆ “ಪರದೇಸಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಸಂಜೆಗಣ್ಣಿನ ಚೆಲುವು : ಎಲ್.ಜಿ.ಮೀರಾ ಲಲಿತ ಪ್ರಬಂಧ

ಮೂರು ವರ್ಷ ಮುಗಿಯುತ್ತಿದ್ದಂತೆ ಮಂತ್ರಿಗಳು ಅವನ ಬಳಿ ಬಂದು “ನಾಳೆ ನಿಮ್ಮನ್ನು ಕಾಡಿಗೆ ಒಯ್ದು ಬಿಡುತ್ತೇವೆ, ತಯಾರಾಗಿರಿ” ಎಂದಾಗ ಅವನು ಸ್ವಲ್ಪವೂ ವಿಚಲಿತನಾಗದೆ ಒಪ್ಪಿಕೊಳ್ಳುತ್ತಾನೆ. ಮಾರನೆಯ ದಿನ ಅವನಿಗೆ ಇಷ್ಟವಾದ ಊಟತಿಂಡಿಗಳನ್ನು ಕೊಟ್ಟು ಊರಿನ ಪಕ್ಕದಲ್ಲಿದ್ದ ನದಿಯನ್ನು ದೋಣಿಯಲ್ಲಿ ದಾಟಿಸಿ ಅವನನ್ನು ಕಾಡಿಗೆ ಬಿಡಲು ಹೋದವರಿಗೆ ಒಂದು ಅಚ್ಚರಿ ಕಾದಿರುತ್ತದೆ. ಕೆಲವೇ ವರ್ಷಗಳ ಹಿಂದೆ ಗೊಂಡಾರಣ್ಯವಾಗಿದ್ದದ್ದು ಈಗ ನಾಡಾಗಿರುತ್ತದೆ!
ವೃದ್ಧಾಪ್ಯದ ದಿನಗಳ ಕುರಿತು ಡಾ. ಎಲ್.ಜಿ. ಮೀರಾ ಲಲಿತ ಪ್ರಬಂಧ

Read More

ಸರ್ವಶಕ್ತ ಮಹಿಳೆಯಲ್ಲ ನಾನು, ನಿಜ ಮಹಿಳೆ: ಎಲ್.ಜಿ.ಮೀರಾ ಬರಹ

ಉದ್ಯೋಗಸ್ಥ ಮಹಿಳೆಯ ಅಪರಾಧಿ ಪ್ರಜ್ಞೆಯು ಸಹ ಗಂಡಾಳಿಕೆಯ ಸಮಾಜವು ನಿರ್ಮಿಸಿದ್ದೇ ಆಗಿರುತ್ತೆ. ಸ್ತ್ರೀವಾದದ ಮಾತೃಚಿಂತಕಿಯರಲ್ಲೊಬ್ಬರಾದ ವರ್ಜೀನಿಯಾ ವೂಲ್ಫ್ ಹೇಳುವ ಗೃಹದೇವತೆಯ ಬಿಂಬ ನೆನಪಾಗುತ್ತೆ. `ಮನೆಕೆಲಸ, ಮನೆವಾಳ್ತೆ ಎಂದರೆ ಅದು ಹೆಣ್ಣಿನ ಜವಾಬ್ದಾರಿ ಮಾತ್ರ’ ಎಂದು ತಿಳಿದಿದ್ದ ಪರಿಸರದಲ್ಲಿ ಬೆಳೆದ ಹೆಂಗಸರಲ್ಲಿ, `ಮನೆಕೆಲಸವನ್ನು ಸರಿಯಾಗಿ ಮಾಡದಿರುವ ಬಗ್ಗೆ’ ಒಂದು ಅಪರಾಧಿ ಪ್ರಜ್ಞೆ ಇರುತ್ತದೆ. ಅವರ ಸುಪ್ತ ಮನಸ್ಸಿನಲ್ಲಿ ಅದು ಸೇರಿ ಹೋಗಿರುತ್ತದೇನೋ!
ಉದ್ಯೋಗಸ್ಥ ಮಹಿಳೆಯರು ಮನೆ-ಉದ್ಯೋಗ ಸಂಭಾಳಿಸುವುದರ ಕುರಿತು ಡಾ. ಎಲ್. ಜಿ. ಮೀರಾ ಬರಹ

Read More

‘ಅವಳ ಪಥ’ದ ಹಲವು ಪದರಗಳು: ಡಾ. ಎಲ್.ಜಿ. ಮೀರಾ ವಿಮರ್ಶೆ

ಚೇತನಾ ಹೆಗಡೆಯಂತಹ ಹೊಸ ವಿಮರ್ಶಕಿಯರು ಇವತ್ತು `ಹಿಂದಣ ಹಜ್ಜೆಯ’ ಚೈತನ್ಯವನ್ನು ಮೈಗೂಡಿಸಿಕೊಂಡು, ಆದರೆ, ಅಲ್ಲಿ ವಿರಮಿಸದೆ `ಮುಂದಣ ಹೆಜ್ಜೆ’ಯನ್ನು ಇಡಬೇಕಿದೆ, ಸ್ತ್ರೀ ಅಸ್ಮಿತೆಯ ಹೊಸ ದಿಕ್ಕುಗಳನ್ನು ಶೋಧಿಸಬೇಕಿದೆ. ನಮಗೆ ಹೊರನೋಟಕ್ಕೆ ತೋರುವ ಸ್ತ್ರೀಮಾದರಿಗಳು ಹೊಸಹೊಸದಾಗಿವೆ ಮಾತ್ರವಲ್ಲ, ಇಂದು `ಸ್ತ್ರೀ’ಎಂಬ ವ್ಯಕ್ತಿಯ ಅಸ್ಮಿತೆಯೇ ಬದಲಾಗುತ್ತಿದೆ. ಈಗ ಸ್ತ್ರೀ ಹಾಗೂ ಪುರುಷ ಎಂಬುದು ಅಚ್ಚುಕಟ್ಟಾಗಿ ಗೆರೆ ಕೊರೆದಂತೆ ಪ್ರತ್ಯೇಕಿಸಬಹುದಾದ ಎರಡು ಧ್ರುವಗಳಾಗಿ ಉಳಿದಿಲ್ಲ, ಅದೊಂದು ವರ್ಣಪಟಲ(ಸ್ಪೆಕ್ಟ್ರಮ್), ಅನೇಕ ಆಯ್ಕೆ ಮತ್ತು ಸಂಯೋಜನೆಗಳ ಒಂದು ವಿಸ್ತಾರ.
ಚೇತನಾ ಹೆಗಡೆ `ಅವಳ ಪಥ’ ಕೃತಿಯ ಕುರಿತು ಡಾ. ಎಲ್.ಜಿ. ಮೀರಾ ಬರಹ ನಿಮ್ಮ ಓದಿಗೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್‌ ಬರಹ

ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ…

Read More

ಬರಹ ಭಂಡಾರ