Advertisement

Tag: ಡಾ. ಪ್ರಸನ್ನ ಸಂತೇಕಡೂರು

ಕಾರಂತರ ದಾರಿಯಲ್ಲಿ ಸಾಗಿದ ಬಾಲಕ: ಡಾ. ಮಹೇಂದ್ರಮೂರ್ತಿ ದೇವನೂರು

ಪ್ರಸನ್ನರ ಕತೆಗಳು ಆಧುನಿಕ ಬದುಕಿನ ಸಂವೇದನೆಗಳನ್ನೂ ದಾಖಲಿಸುತ್ತವೆ. ವಿಜ್ಞಾನ, ತಂತ್ರಜ್ಞಾನದ ಅನೇಕ ಸಂಗತಿಗಳು ಕತೆಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕತೆಗಳು ವರದಿಯಾಗಬಾರದು. ಸಾಹಿತ್ಯ ಕೃತಿಗಳಾಗಬೇಕು. ಸಂದೇಶವನ್ನು ರವಾನಿಸಬೇಕು. ಸಮಾಜದ ಪ್ರಗತಿಗೆ ಬೆಳಕಿಂಡಿಗಳನ್ನು ತೆರೆಯಬೇಕು ಎಂದು ನಂಬಿದವನು ನಾನು. ಕೆಲವು ಕತೆಗಳು ಆ ಕೆಲಸವನ್ನು ಪೂರೈಸಿವೆ. ವಿಜ್ಞಾನ, ದೇಶ-ವಿದೇಶಗಳ ವಸುಗಳು ಕತೆಯಾಗುತ್ತಿರುವುದು ವಿಶೇಷ. ಆದರೆ ಮೌಢ್ಯವನ್ನು ಬಿತ್ತಬಾರದು.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಡಾ. ಮಹೇಂದ್ರಮೂರ್ತಿ ದೇವನೂರು ಬರಹ

Read More

ವಿಜ್ಞಾನದೊಂದಿಗೆ ಅಧ್ಯಾತ್ಮವೂ ಮಿಳಿತವಾಗುವ ಹೊತ್ತು…

ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ