Advertisement

Tag: ಡಾ.ವಿನತೆ ಶರ್ಮ

ಕನ್ನಡತನ ಜ್ವಲಿಸುವ ವಿಶೇಷ ತಿಂಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆಯುವ ಕನ್ನಡಿಗ ದಂಪತಿಗಳ ಮಕ್ಕಳು ಕನ್ನಡದಲ್ಲಿ ಮಾತನಾಡುವುದು ಕಡಿಮೆ. ಒಂದುವೇಳೆ ಅವರು ಕಷ್ಟಪಟ್ಟು ಪ್ರಯತ್ನಿಸಿದರೂ ಅವರುಗಳು ಪ್ರತಿದಿನವೂ ಮಾತನಾಡುವ ಆಸ್ಟ್ರೇಲಿಯನ್ ಇಂಗ್ಲಿಷ್ ಉಚ್ಚಾರದ ಪ್ರಭಾವದಲ್ಲಿ ತಮ್ಮ ಕನ್ನಡವನ್ನು ಹೊರಡಿಸಿದಾಗ ಮಿಶ್ರಿತ ಭಾವಗಳು ಏಳುತ್ತವೆ. ಕರ್ನಾಟಕದಲ್ಲಿಯೇ ಹುಟ್ಟಿ ಕೆಲವರ್ಷ ಅಪ್ಪಟ ಕನ್ನಡತನದಲ್ಲಿ ಅಲ್ಲಿಯೇ ಬೆಳೆದು ತಮ್ಮ ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಬರುವ ಮಕ್ಕಳು ಕೆಲವೇ ವರ್ಷಗಳಲ್ಲಿ ಆಸ್ಟ್ರೇಲಿಯನ್ ಇಂಗ್ಲಿಷ್ – ಕನ್ನಡವನ್ನು ರೂಢಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮ ಕನ್ನಡದಲ್ಲಿ ಮಾತನಾಡಿಸುವಾಗ ಈ ಮಕ್ಕಳು ಇಂಗ್ಲೀಷಿನಲ್ಲಿ ಉತ್ತರಿಸುವುದು ಸರ್ವೇಸಾಮಾನ್ಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಶಮನವಾಗಬೇಕಿದೆ ಶತಮಾನಗಳ ನೋವು: ವಿನತೆ ಶರ್ಮ ಅಂಕಣ

ಕಳೆದ ಶನಿವಾರ ಅಕ್ಟೋಬರ್ ೧೪ ರ ಸಂಜೆ ಸೋಲೆಂಬುದು ಬಹುಬೇಗ ಬಂತು. ಅದೇನೋ ಅವಸರವಿದೆ ಎನ್ನುವ ರೀತಿ ಧಾವಿಸಿ ಬಂದಂತೆ, ಇಗೋ ತಗೊಳ್ಳಿ ಎಂಬಂತೆ ಇಡೀ ದೇಶವನ್ನೇ ಆವರಿಸಿ ಮಂಕು ಹಿಡಿಸಿಬಿಟ್ಟಿತು. ಇದೇನಿದು ಮತ ಎಣಿಕೆ ಈಗಷ್ಟೇ ಆರಂಭವಾಯ್ತಲ್ಲ ಎನ್ನುವ ಮಾತು ಗಾಳಿಯಲ್ಲಿ ಇನ್ನೂ ತೇಲಾಡುತ್ತಿರುವಾಗಲೇ ‘ನೋ ವೋಟ್’ ಹೆಚ್ಚಾಗಿ, ನಾನು ಟಿವಿ ಮುಂದೆ ಹಾಗೆಯೇ ಸ್ಥಬ್ಧಳಾಗಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಶಾಂತಿ, ಕ್ರಾಂತಿ, ಸ್ವಾತಂತ್ರ್ಯದ ಹಗಲುಗನಸು: ಡಾ. ವಿನತೆ ಶರ್ಮ

ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು.
ಡಾ. ವಿನತೆ ಶರ್ಮ ಹೊಸ ಕೃತಿ “ಅಬೊರಿಜಿನಲ್‌ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್‌”ಯಿಂದ ಒಂದು ಬರಹ ನಿಮ್ಮ ಓದಿಗೆ

Read More

ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ವಸಂತನು ತರುವ ಹಬ್ಬಗಳ ಬಣ್ಣದೋಕುಳಿ!: ವಿನತೆ ಶರ್ಮ ಅಂಕಣ

ಈ ಸೌತ್ ಬ್ಯಾಂಕ್ ಎನ್ನುವುದು ಒಂದು ಮನರಂಜನಾ ತಾಣವಾಗಿ ರೂಪುಗೊಂಡಿದೆ. ಮಕ್ಕಳು, ದೊಡ್ಡವರು, ಕುಟುಂಬಗಳು, ಪ್ರೇಮಿಗಳು, ವಿಹಾರಿಗಳಿಗೆ ಎಲ್ಲರಿಗೂ ಇಲ್ಲಿ ಅವರವರಿಗೆ ಬೇಕಾದಂತೆ ಹುಲ್ಲುಗಾವಲು, ನಡಿಗೆ ಹಾದಿ, ತರಕಾರಿ ಕೈತೋಟ, ಹೂತೋಟ, ಮಕ್ಕಳನ್ನು ಮನರಂಜಿಸುವ ನೀರಿನ ಕಾರಂಜಿ, ಈಜುಕೊಳ ಮುಂತಾದವು, ದೊಡ್ಡವರಿಗೆ ಇರುವ ಸರೋವರ ಎಲ್ಲವೂ ಇದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿವಿಧ ಹಬ್ಬಗಳ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ