Advertisement

Tag: ನಾರಾಯಣ ಯಾಜಿ

ನಾರಾಯಣ ಯಾಜಿ ಈ ಭಾನುವಾರದ ಕಥೆ

ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.

Read More

ಕಿರಣ ಭಟ್ ಬರೆದ “ರಂಗ ಕೈರಳಿ” ಪುಸ್ತಕದ ಕುರಿತು ನಾರಾಯಣ ಯಾಜಿ ಲೇಖನ

“ರಂಗಭೂಮಿಯ ಮೂಲಕ ಕೇರಳದ ವೈವಿದ್ಯದ ಪರಿಚಯ ಆಗುವ ಜೊತೆಗೆ ಉತ್ತರಕನ್ನಡ ಇಲ್ಲಿನ ಹಲಸಿನ ಬೇಳೆ, ಮಳೆ, ದೇವರುಗಳೆಲ್ಲ ಇಲ್ಲಿ ಹಾಸುಹೊಕ್ಕುವ ಪರಿ ಅಚ್ಚರಿ ಹುಟ್ಟಿಸುವದು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ರಂಗಭೂಮಿಯಲ್ಲಿ ಮೌನವಾಗಿ ತೊಡಗಿಕೊಂಡ ಸಂಕೋಚದ ಮುದ್ದೆಯಾಗಿ ಕಾಣುವ…”

Read More

ಕಾಲವೇ ಸೃಷ್ಟಿಸಿಕೊಂಡ ಕಲಾವಿದ ಜಲವಳ್ಳಿ ವೆಂಕಟೇಶ ರಾವ್: ನಾರಾಯಣ ಯಾಜಿ ಲೇಖನ

“ಚಿಟ್ಟಾಣಿಯವರೊಟ್ಟಿಗಿನ ಅಂದಿನ ಭೀಮ ಯಶಸ್ವಿಯಾಗಿದ್ದೇ ನಂತರ ಅವರು ಪ್ರತಿನಾಯಕನ ಪಾತ್ರಕ್ಕೆ ಅದರಲ್ಲೂ ಧೀರದತ್ತ ಪಾತ್ರಕ್ಕೆ ಬಹುವಾದ ಪ್ರಸಿದ್ಧಿಯನ್ನು ಪಡೆದರು. ಅವರಿಗೆ ಭೀಮನಂತೆ ಪ್ರಸಿದ್ಧಿ ನೀಡಿದ ಮತ್ತೊಂದು ಪಾತ್ರ ಚಿತ್ರಾಕ್ಷಿಕಲ್ಯಾಣದ ರಕ್ತಜಂಘನ ಪಾತ್ರ. ಈ ಪಾತ್ರವೂ ಅವರಿಗೆ ಆಕಸ್ಮಿಕವಾಗಿ ದೊರೆತದ್ದೆ.”

Read More

ರಾಜಶೇಖರ ಜೋಗಿನ್ಮನೆ ಕಥಾ ಸಂಕಲನದ ಕುರಿತು ನಾರಾಯಣ ಯಾಜಿ ಬರಹ

“ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ “

Read More

ನೈದಿಲೆಯ ಒಡಲು: ನಾರಾಯಣ ಯಾಜಿ ಬರೆದ ಕತೆ

“ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ ಪೊಸೆಸಿವ್ ನೆಸ್ ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ