ಸುಯ್ಯೆಂದು ಹಾಡುವ ಸೊಳ್ಳೆಯ ಸುದ್ದಿ: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ಪ್ರಕಾಶ್, ತನ್ನ ಪುಟ್ಟ ನಾದಿನಿಯರನ್ನು ಗೋಳು ಹೊಯ್ದುಕೊಳ್ಳುವ ಸಲುವಾಗಿ “ನಿಮಗೆ ಗೊತ್ತೇನ್ರೋ? ಎಲ್ಲಾ ಬಗೆಯ ಜೀವಿಗಳಲ್ಲೂ ಗಂಡುಗಳು ತುಂಬಾ ಪಾಪದವು. ಸೇಮ್ ನನ್ನ ಥರಾನೇ! ಸೊಳ್ಳೆಗಳಲ್ಲೂ ಅಷ್ಟೇ!” ಅಂತ ನಾಟಕ ಮಾಡಿ ನಗಿಸಿದ. ಆಮೇಲೆ ಸೊಳ್ಳೆಗಳ ಬಗ್ಗೆ ವಿವರಿಸುತ್ತಾ “ಆದ್ರೆ ಇದು ತಮಾಷೆಯಲ್ಲ! ಗಂಡು ಸೊಳ್ಳೆಗಳು ನಮ್ಮನ್ನು ಕಚ್ಚಲ್ಲ; ಅವು ಹೂವುಗಳ ಮಕರಂದದಂತಹ ಆಹಾರದ ಮೇಲೆ ಡಿಪೆಂಡ್ ಆಗಿರತ್ವೆ; ಹೆಣ್ಣು ಸೊಳ್ಳೆಗಳು ಪಾಪ, ಮೊಟ್ಟೆ ಇಡೋಕೆ, ಮರಿಗಳಿಗೆ ಶಕ್ತಿ ನೀಡೋಕೆ ನಮ್ಮ ರಕ್ತದಲ್ಲಿರುವ ಪ್ರೋಟೀನ್ ಮೇಲೆ ಅವಲಂಬಿತ. ಅದಕ್ಕಾಗಿ ಅವು ಕಚ್ಚಲೇಬೇಕು, ರಕ್ತ ಹೀರಲೇಬೇಕು, ನಮ್ಮ ಕೈಯಲ್ಲಿ ಸಿಕ್ಕಿ ಸಾಯಲೂ ಬೇಕು”
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹನ್ನೆರಡನೆಯ ಕತೆ

