‘ನಿಜಸತ್ಯ’ದ ನಿತ್ಯ ಕವಿತೆಗಳು: ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ
ವ್ಯಭಿಚಾರಿ ಹೂವು ಕವನ ಸಂಕಲನದ ಕವನಗಳನ್ನು ಓದಿದಂತೆ, ಓದಿಯಾಯಿತು ಎಂದು ಪೂರ್ಣವಿರಾಮ ಹಾಕಲು ಆಗುವುದೇ ಇಲ್ಲ. ಇನ್ನೊಮ್ಮೆ ಓದೋಣ, ಮತ್ತೊಮ್ಮೆ ಓದೋಣ ಎಂದೆನಿಸುತ್ತಲೇ ಇರುತ್ತದೆ. ಅರ್ಜುನನಿಗೆ ಶ್ರೀಕೃಷ್ಣನಂದು ಗೀತೆ ಬೋಧಿಸಿದ. ಕವಿ ಮನು ಗುರುಸ್ವಾಮಿಯವರು ‘ಕವಿತೆ’ ಬೋಧಿಸುತ್ತಿದ್ದಾರೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಕವನ ಸಂಕಲನ ‘ಆತ್ಮಗೀತೆ!’ ಮಾನವ ಬದುಕಿಗೆ ಸ್ವಾರ್ಥ, ಮೋಸ, ವಂಚನೆ, ತಲ್ಲಣ, ತಳಮಳ….ಗಳೆಲ್ಲವೂ ಬಿತ್ತರವಾಗಿವೆ. ಮನದ ಅಸಹನೆಯನ್ನು ‘ಸತ್ಯನುಡಿ’ಗಳ ಮೋಹಕತೆಯಲ್ಲಿ ರಂಗೇರಿಸುತ್ತದೆ.
ಮನು ಗುರುಸ್ವಾಮಿ ಕವನ ಸಂಕಲನ “ವ್ಯಭಿಚಾರಿ ಹೂವು”ಕ್ಕೆ ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ