Advertisement

Tag: ಪ್ರಬಂಧ

ದೇವರೇ ಬೆನ್ನಟ್ಟಿ ಬಂದಾಗ!

ಅದ್ಯಾವಾಗ ಹರ್ಷ ಬಾಗಿಲು ದಾಟಿದ ಸದ್ದಾಯಿತೋ ಕೋಮಲ ನಿಧಾನವಾಗಿ ಕಣ್ಣು ಬಿಟ್ಟಿದ್ದಾನೆ. ಬಿಟ್ಟವನು ತಾನು ಸಿನಿಮಾ ನೋಡಲು ಹೋಗುವುದೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಫಕ್ಕನೆ ಕರೆಂಟ್ ಹೋಗಿದೆ! ಕೂಡಲೇ ಕೋಮಲ “ನಾನೂ ಜೊತೆಗೆ ಬರುತ್ತೇನೆ” ಎಂದು ಹರ್ಷನಿಗೆ ಹೇಳುವ ಸಲುವಾಗಿ “ಹರ್ಷ., ಹರ್ಷ.,” ಎಂದಿದ್ದಾನೆ. ನೋಡಿದರೆ ಅದಾಗಲೇ ಹರ್ಷ ಜಾಗ ಖಾಲಿ ಮಾಡಿ ಆಗಿದೆ. ಒಡನೆಯೇ ಕೋಮಲನಿಗೆ ಇಡೀ ಕಟ್ಟಡದಲ್ಲಿ ಇರುವುದು ತಾನೊಬ್ಬನೇ ಎಂಬ ಹೊಳವು ಬಂದು ದಿಗಿಲಾಗಿದೆ.
ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನಾನೇಕೆ ಪಾತ್ರವಾಗುವುದಿಲ್ಲ

ತಪ್ಪು ತಿಳಿಯಬೇಡಿ! ನನಗೆ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಜೊತೆಗೇ ಇದ್ದುಬಿಡುವುದು, ಅವುಗಳ ಜೊತೆ ಹೋಗಿಬಿಡುವುದೇ ಇಷ್ಟ. ನಾಲ್ಕು ಜನರ ಮಧ್ಯೆ, ಜನಸಂದಣಿಯ ನಡುವೆ ಇದ್ದೂ ಕೂಡ ನಾನು ಪಾತ್ರಗಳ ಜೊತೆ ಇದ್ದುಬಿಡಬಲ್ಲೆ. ಕುಟುಂಬದ ಸದಸ್ಯರು ಆಗಾಗ್ಗೆ ಆಕ್ಷೇಪಣೆ ತೆಗೆಯುವುದುಂಟು. ನೀವು ಮನೆಯಲ್ಲಿದ್ದರೂ, ನಮ್ಮೊಡನೆಯೇ ಇರುವಂತೆ ಕಂಡರೂ, ಇನ್ನೊಂದು ಲೋಕದಲ್ಲಿರುತ್ತೀರಿ. ಯಾರ ಮಾತನ್ನೋ ಕೇಳಿಸಿಕೊಳ್ಳುತ್ತಿರುತ್ತೀರಿ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೊಂದನೆಯ ಪ್ರಬಂಧ ನಿಮ್ಮ ಓದಿಗೆ

Read More

ಸರ್ಟಿಫಿಕೇಟ್‌ ದಾತರು

ಕೆಲವರಿಗೆ ಹೆಚ್ಚು ಹೆಚ್ಚು ಸರ್ಟಿಫಿಕೇಟ್‌ಗಳನ್ನು ನೀಡುವ ಆಸೆಯಿರುತ್ತದೆ. ಇಂಥವರು ತಮ್ಮ ಪ್ರಸಿದ್ಧಿಯನ್ನು ತಾವೇ ಹಬ್ಬಿಸುತ್ತಾರೆ. ಇಂಥವರು ನನಗೆ ಸ್ವಲ್ಪಕಾಲ ಗಂಟುಬಿದ್ದಿದ್ದರು. ನನ್ನಿಂದ ಸಾಕಷ್ಟು ಉಪಕೃತರೂ ಆಗಿದ್ದರು. ಉತ್ಸವ ಮೂರ್ತಿಯ ಸ್ವಭಾವದ ವ್ಯಕ್ತಿತ್ವ. ನಾನು ಎಲ್ಲಿಗೇ ಹೊರಡಲಿ, ಯಾವ ಕಾರ್ಯಕ್ಕೇ ಹೊರಡಲಿ, ಆಯ್ತು ಅಲ್ಲಿ ನನಗೆ ಇಂಥವರು ಪರಿಚಯ, ನನ್ನ ಬಗ್ಗೆ ಗೌರವವಿದೆ, ನನ್ನಿಂದ ಒಂದು ಸರ್ಟಿಫಿಕೇಟ್‌ ತಗೊಂಡು ಹೋಗು ಎನ್ನುತ್ತಿದ್ದರು. ಹೌದು ಅವರ ಇಂಗ್ಲಿಷ್‌ ತುಂಬಾ ಚೆನ್ನಾಗಿತ್ತು. ಸರ್ಟಿಫಿಕೇಟ್‌ ಬರೆದುಕೊಡುವ ಕಾಗದ ಕೂಡ ಚಿನ್ನದ ಬಣ್ಣದಿಂದ ಹೊಳೆಯುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹತ್ತನೆಯ ಪ್ರಬಂಧ ನಿಮ್ಮ ಓದಿಗೆ

Read More

ಮಸಲ್‌ ಮೆಮೊರಿ ಮತ್ತು ನಾವು….

ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ನಮಗೇ ಯಾಕೆ ಹೀಗಾಗುತ್ತೆ?

ನಮಗೆ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲವೆಂದು ಕಾಣುತ್ತದೆ. ನಾವು ಜೀವನವನ್ನು, ಮನಷ್ಯರನ್ನು, ಬಂದ ಹಾಗೆ, ಅವರು ಇರುವ ಹಾಗೆ ಒಪ್ಪಿಕೊಳ್ಳುವ ನಮ್ರತೆಯನ್ನು ತೋರಿಸುವುದಿಲ್ಲ. ಎಲ್ಲ ಘಟನೆಗಳ ಮೇಲೂ ನಮ್ಮ ನಿಯಂತ್ರಣವಿರಬೇಕು, ಇರುತ್ತದೆ. ನಾವು ಇಷ್ಟಪಟ್ಟ ಹಾಗೆಯೇ ಜಗತ್ತು ನಡೆಯಬೇಕು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎಂಟನೆಯ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ