ನಾನೇಕೆ ಜಾತಿವಾದಿಯಲ್ಲ?
ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಏಳನೆಯ ಪ್ರಬಂಧ ನಿಮ್ಮ ಓದಿಗೆ