Advertisement

Tag: ಪ್ರೀತಿ

ಹರಿಸಲಾರದ ಸಮುದ್ರವಿದೆ ಅವನಲ್ಲೂ..: ಆಶಾ ಜಗದೀಶ್ ಅಂಕಣ

ಇಷ್ಟೆಲ್ಲ ಗೊಂದಲ, ಪ್ರಶ್ನೆಗಳ ನಡುವೆಯೂ ನಾನೇಕೆ ಪತಿಪೂಜೆ ಮಾಡುತ್ತೇನೆ ಎಂದರೆ ಅದು ಧಾರ್ಮಿಕ ಕಟ್ಟಳೆಯಲ್ಲ ಅದು ಹೃದಯದ ನಿವೇದನೆ. ನನ್ನವನೆದುರು ನನ್ನ ಪ್ರೀತಿಯನ್ನು ತೋರಿಸಿಕೊಳ್ಳುವ ಒಂದು ವಿಧಾನ. ನಾವು ಹೆಣ್ಣುಮಕ್ಕಳಿಗೆ ಇಂತಹ ಹಲವಾರು ದಾರಿಗಳಿವೆ. ನಾವು ಯಾವುದನ್ನೂ ಮುಚ್ಚಿಟ್ಟುಕೊಳ್ಳಲಾರೆವು. ಕೋಪ, ಅಸಹನೆ, ನೋವು, ನಗು, ಅಳು… ಎಲ್ಲವನ್ನೂ ತೋರಿಸಿಕೊಂಡುಬಿಡುತ್ತೇವೆ. ಆದರೆ ಗಂಡಿಗೆ ಹಾಗಲ್ಲ. ಅವನು ತನ್ನ ನೋವನ್ನಾಗಲೀ, ಅಳುವನ್ನಾಗಲೀ, ಕಣ್ಣೀರನ್ನಾಗಲೀ ತೋರಿಸುವಂತೆಯೇ ಇಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಅವನ ಸಂಗೀತದ ಸರಪಳಿಯಲ್ಲಿ…: ಆಶಾ ಜಗದೀಶ್ ಅಂಕಣ

ಒಂದು ತಾನ್ ನಿಂದ ಮತ್ತೊಂದಕ್ಕೆ ಸಂಚರಿಸುವಾಗ ಒಂದು ಸೆಕೆಂಡ್ ಮಾತ್ರದಲ್ಲಿ ನಿನ್ನ ಧ್ವನಿ ಹೊರಳುತ್ತದಲ್ಲ ಆ ನಾದ ಅದೆಷ್ಟು ಚಂದ… ಅದಕ್ಕೆ ಮುಲಾಮಿನ ಗುಣವಿದೆ. ಕ್ಷಣ ಮಾತ್ರದಲ್ಲಿ ಭಾರವಾದ ಎದೆಯನ್ನು ಹಾರಿ ನಲಿಯುವಂತೆ ಮಾಡಿಬಿಡಬಲ್ಲ ಶಕ್ತಿಯಿದೆ ಅಂತಲೇ ನನಗೆ ಬಲವಾಗಿ ಅನಿಸುತ್ತದೆ. ಆ ಕ್ಷಣ ನಾನು ಯಾರು ಎನ್ನುವುದು ನನಗೆ ಮರೆತು ಹೋಗುತ್ತದೆ. ಯಾವ ವಿಳಾಸ, ನಾಮಧೇಯವಿರದ ಶಕ್ತಿಯ ಸಣ್ಣದೊಂದು ಚೂರಿನಂತೆ ಹೊಳೆಯುತ್ತಿದ್ದೇನೆ ಎಂದು ಭಾಸವಾಗುತ್ತದೆ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಆಶಾ ಜಗದೀಶ್ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ…

ಪ್ರೀತಿ ಮಾತ್ರ ಪೂರ್ಣ ಸತ್ಯ. ಮೋಸ ಎಂಬುದು ಅರ್ಧ ಸತ್ಯ. ನಾವು ಯಾರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಪದೇ ಪದೇ ಮೋಸಹೋಗುತ್ತೇವೆ. ಅದೂ ಹೃದಯವಿದ್ರಾವಕವಾಗಿ. ನಮ್ಮನ್ನು ನಾವೇ ನೋಯಿಸಿಕೊಂಡು ಇತರರನ್ನು ದೂರುತ್ತೇವೆ… ನಿನ್ನನ್ನು ಪ್ರೀತಿಸದಿರಲು ಸಾಧ್ಯವಾಗುವುದಾ…
ಆಶಾ ಜಗದೀಶ್ ಬರೆಯುವ ಬದುಕೆಂಬ ಭಾವಗೀತೆಯ ಕುರಿತ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ ಮಂಗಳವಾರಗಳಂದು ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ನೆನಪಾಗಿ ಉಳಿದ ಟ್ರೂತನ್

ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!
ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ…

Read More

ಬರಹ ಭಂಡಾರ