ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ
ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”