Advertisement

Tag: ಮಲೆನಾಡು

ಸವಿಯ ಬನ್ನಿ ಮಲೆನಾಡ ಊಟವ…: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮನೆಯ ಬೇಸಿಗೆಯ ಹಿತ್ತಲಲ್ಲಿ ಆಯಿ, ಹೂ ಕೋಸು, ಗಡ್ಡೆ ಕೋಸು ಮೂಲಂಗಿ, ಬೀಟ್ರೂಟ್‌ಗಳನ್ನು ಕೂಡಾ ಸಮೃದ್ಧವಾಗಿ ಬೆಳೆಸುತ್ತಿದ್ದಳು. ಮುಂದಿನ ಮೂರು ತಿಂಗಳು ನಾವೆಲ್ಲ ಯಥೇಚ್ಛವಾಗಿ ತರಕಾರಿಯನ್ನು ಉಪಯೋಗಿಸಬಹುದಾಗಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಮೊಗೇ ಕಾಯಿ ಬೆಳೆಸುವುದು ಬೇಸಿಗೆಯ ಹಿತ್ತಲಿನ ವಿಶೇಷ. ಈ ಮೊಗೆ ಕಾಯಿ (ಬಣ್ಣದ ಸೌತೆ ಕಾಯಿ) ಯೆಂಬುದು ಮಲೆನಾಡಿಗರ ಆಪದ್ಬಾಂಧವನಿದ್ದಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಒಂಭತ್ತನೆಯ ಕಂತು

Read More

ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ನಮ್ಮ ಕಾಲದ ಕೃಷಿ….: ರೂಪಾ ರವೀಂದ್ರ ಜೋಶಿ ಸರಣಿ

ಈ ಗದ್ದೆ ಕೆಲಸ ನಡೆಯುವಾಗ ನಾನಂತೂ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಗದ್ದೆಗೆ ಓಡುತ್ತಿದ್ದೆ. ಅವೆಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತ, ಅವರ ಮಾತು, ಗಲಗಲ ನಗೆಗೆ ನಾನೂ ಹಲ್ಲು ಕಿಸಿಯುತ್ತ ಮೈ ಮರೆತು ನಿಂತು ಬಿಡುತ್ತಿದ್ದೆ. ತಿರುಗಾ ಆಯಿ ಜೋರಾಗಿ ಕರೆದು, “ಯೇ ಬಾರೇ. ಊಟ ಮಾಡಿ ಶಾಲೆಗೆ ಹೊರಡು” ಎಂದು ಗದರಿದಾಗ, “ಥೋ… ಇದೊಂದು ಮಳ್ಳು ಶಾಲೆ” ಎಂದು ನನ್ನೊಳಗೇ ಗೊಣಗುತ್ತ, ಅಲ್ಲಿಂದ ಕಾಲು ಕೀಳುತ್ತಿದ್ದೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಮಲೆನಾಡಿನ ಗದ್ದೆಗಳಲ್ಲಿ ನೆಟ್ಟಿ ಸಂಭ್ರಮ: ಭವ್ಯ ಟಿ. ಎಸ್. ಸರಣಿ

ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಸಂಸೆ ಗುಡ್ಡದ ಮೇಲೆ ಮಕ್ಕಳು ಹೇಳಿದ ಪಾಠ

ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.
ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು.  ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌  ಎಂದು…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ