Advertisement

Tag: ಸುಧಾ ಆಡುಕಳ

ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪುರಸ್ಕಾರ: ಸುಧಾ ಆಡುಕಳ ಬರಹ

ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು.
ಈ ಸಲದ ನೊಬೆಲ್‌ ಶಾಂತಿ ಪುರಸ್ಕೃತ ನರ್ಗೆಸ್‌ ಮೊಹಮ್ಮದಿ ಅವರ ಕುರಿತು ಸುಧಾ ಆಡುಕಳ ಬರಹ

Read More

ಟೇಪ್‌ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ

ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಎಂದಿಗೂ ಹುಟ್ಟದ ಮಗುವಿಗೆ ಮೂರು ಕಿನ್ನರ ಕತೆಗಳು

ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್‌ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು.
ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿಯವರ ‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಕಾದಂಬರಿಯನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸುತ್ತಿದ್ದು, ಅದರ ಭಾಗವೊಂದು ನಿಮ್ಮ ಓದಿಗೆ ಇಲ್ಲಿದೆ

Read More

ಬದುಕ ಬೆಳಗಿಸುವ ಸರಳ ಸೂತ್ರಗಳು

ಮೊಗ್ಗು ಸಹಜವಾಗಿ ಬಿರಿದಾಗಲೇ ಹೂವಾಗುವುದು. ಬಗೆಬಗೆಯ ಸಸ್ಯವರ್ಗಗಳು ಸೇರಿಯೇ ಕಾಡಾಗುವುದು, ಮರಕ್ಕೆ ಭೂಮಿಯಾಸರೆ, ಮರವು ಬಳ್ಳಿಗಾಸರೆಯಾದರೆ ಹೂ, ಕಾಯಿ, ಹಣ್ಣುಗಳು ಸಕಲ ಜೀವಿಗಳಿಗಾಸರೆಯಾಗಿ ಪೊರೆಯುತ್ತವೆ. ಇಲ್ಲಿ ಎರೆಹುಳುವಿನಿಂದ ಹಿಡಿದು ಚಿಟ್ಟೆಗೂ, ಹುಲಿಗೂ, ಹುಲ್ಲಿಗೂ ಅದರದೇ ಆದ ಕೆಲಸಗಳಿವೆ. ಯಾವುದೂ ಮುಖ್ಯವಲ್ಲ; ಯಾವುದೂ ಅಮುಖ್ಯವಲ್ಲ. ಮನುಷ್ಯನ ಕೆಲಸಕ್ಕೂ, ಕಾಯಕಕ್ಕೂ ಅನ್ವಯಿಸಿಕೊಳ್ಳಬೇಕಾದ ಮಾತುಗಳಿವು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ರೂಪಾಂತರದ ಆಯಾಮಗಳು

ಮಾನವರು ಯಕ್ಷರಾಗುವ ಪ್ರಕ್ರಿಯೆ ನಮ್ಮೊಳಗೆ ಅಡಕವಾಗುತ್ತ ನಡೆದಾಗಲೂ ಕೆಲವೊಮ್ಮೆ ಭ್ರಮೆ ಮತ್ತು ವಾಸ್ತವಗಳು ಮನಸ್ಸಿನಲ್ಲಿ ತಾಡಿಸುತ್ತಲೇ ಇರುತ್ತಿದ್ದವು. ದುಃಶ್ಶಾಸನನ ವೇಷ ತೊಟ್ಟ ಅಪ್ಪ, ಭೀಮನಿಂದ ಪೆಟ್ಟುತಿಂದು ಯುದ್ಧರಂಗದಲ್ಲಿ ಓಡುತ್ತಿರುವಾಗ ಅವನೆಲ್ಲಾದರೂ ಅಪ್ಪನನ್ನು ಗದೆಯಿಂದ ಹೊಡೆದು ಕೊಂದಾನೆಂಬ ಭ್ರಮೆಯಲ್ಲಿ ‘ಬೇಡಾ’ ಎಂದು ಕಿರುಚಿದ್ದೂ ಇತ್ತು. ಕೌರವನನ್ನು ಬೆನ್ನಟ್ಟುವ ರೌದ್ರ ಭೀಮನ ಕಣ್ಣಿನ ಕೆಂಪಿಗೆ ಹೆದರಿ, ಅವನೆಲ್ಲಿಯಾದರೂ ಕೌರವನ ವೇಷಧಾರಿಯಾದ ನನ್ನಪ್ಪನ ತೊಡೆಯನ್ನೇ ಮುರಿದಾನೆಂದು ಚಡಪಡಿಸುತ್ತಿದ್ದುದು ಅತ್ತೆಗೆ ಇರಿಸುಮುರಿಸು ಮಾಡುತ್ತಿತ್ತು.
ಮನುಷ್ಯ ಹೊಂದಬಹುದಾದ ರೂಪಾಂತರಗಳ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ