Advertisement

Tag: ಸುಮಾವೀಣಾ

ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ

‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್‌ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ

Read More

ವಿವಿದಾರ್ಥದಿ ಪದನಾರಿ: ಸುಮಾವೀಣಾ ಸರಣಿ

ಏನೋ ಹುಷಾರಿಲ್ವೇನೋ ಎನ್ನುತ್ತಾ… ಟೈಂ ಆಗ್ತಾ ಇದೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ! ಬರಿ! ಎನ್ನುತ್ತಲೇ ಇದ್ದೆ ಅವಳು ‘ನೋ’ ‘ನೋ’ ಎನ್ನುವಂತೆ ತಲೆ ಆಡಿಸಿದಳು ಕಡೆಗೆ ಅವಳೆ “ಏನೂ ಪ್ರಿಪೇರ್ ಆಗಿಲ್ಲ ಮೇಡಮ್ ಹೇಗ್ ಬರೀಲಿ?” ಎಂದಾಗಂತೂ ಈಕೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ ಎಂದದ್ದಕ್ಕೆ ಸಾಧ್ಯ… ನೋ! ನೋ ಸಾಧ್ಯ …! ಎಂದು ತಲೆ ಆಡಿಸಿರುವಳಲ್ಲ… ನಿಜ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ನಾಲ್ಕನೆಯ ಬರಹ

Read More

ಕೀರು ಟೇಸ್ಟ್: ಸುಮಾವೀಣಾ ಸರಣಿ

ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ

Read More

“ಧಂ”ಪತಿ ಮುಯ್ಯಿ: ಸುಮಾವೀಣಾ ಸರಣಿ

‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ

Read More

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ.
ಇಂದು ಕೆ.ವಿ. ತಿರುಮಲೇಶರ ಹುಟ್ಟುಹಬ್ಬ. ಕಳೆದ ವರ್ಷ ತೀರಿಹೋದ ಅವರ ನೆನಪಿಗೆ ಅವರ ‘ಅವಧ’ ಕವನ ಸಂಕಲನದ ಕುರಿತ ಸುಮಾವೀಣಾ ಬರಹ ಇಲ್ಲಿದೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ