ಕೊಡಗಿನ ಮೊಟ್ಟೆಯೂ… ಮದ್ದು ಪಾಯಸವೂ: ಸುಮಾವೀಣಾ ಸರಣಿಸ
ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ