ಮಳೆ, ನೆನಪು ಮತ್ತು ಸಂಬಂಧ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ
