Advertisement

Tag: ಅಂಕಣ

ಸಂಬಂಧಗಳಿಗೂ ಒಂದು ಕೊನೆಯ ದಿನ ಇದ್ದರೆ….!

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ನಿನ್ನೆ ಇದ್ದದ್ದು ಇವತ್ತು ಮಂಗಮಾಯ!

ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಕ್ರಿಕೆಟ್ ಮೈದಾನಗಳು ಮತ್ತು ಕಾಮೆಂಟೇಟರ್ಸ್‌

ಭಾರತದಲ್ಲಿ ಮುಂಚೆ ಟೆಸ್ಟ್ ಮ್ಯಾಚುಗಳು ಆಡುವುದಕ್ಕೆ ಇದ್ದ ಮೈದಾನಗಳು ಕೇವಲ 5. ದೆಹಲಿ, ಮುಂಬೈ, ಕಲ್ಕತ್ತಾ, ಕಾನ್ಪುರ ಮತ್ತು ಮದ್ರಾಸ್ ನಗರಗಳಲ್ಲಿ. ದೆಹಲಿಯ ಫಿರೋಜ್ ಕೋಟ್ಲ, ಮುಂಬೈಯ ಬ್ರೇಬರ್ನ್‌ ಸ್ಟೇಡಿಯಂ, ಕಲ್ಕೊತಾದ ಈಡನ್ ಗಾರ್ಡನ್ಸ್, ಕಾನ್ಪುರದ ಗ್ರೀನ್ ಪಾರ್ಕ್‌, ಮತ್ತು ಚೆನ್ನೈನ ಚೆಪಾಕ್ ಸ್ಟೇಡಿಯಂ. ಆಮೇಲೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಇತ್ಯಾದಿ ಬಂದವು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

ಕುಂಭಮೇಳದ ನೆನಪುಗಳು….

ನನಗೆ ತಣ್ಣಗಿನ ನೀರೆಂದರೆ ನಡುಕ. ಹಾಗಾಗಿ ನೀರಿನಲ್ಲಿ ಮುಳುಗಲು ಹಿಂದು ಮುಂದು ನೋಡುತ್ತಿದ್ದೆ. ಹಾಗೇ ನೋಡಿ ವಾಪಸ್‌ ಬರುವುದು ಅಂತ ನನ್ನ ಇರಾದೆ ಇತ್ತು. ನನ್ನ ಸ್ನೇಹಿತೆ ಸಂಗಮದಲ್ಲಿ ಸ್ನಾನ ಮಾಡುವೆ ಎಂದಾಗ ಅವರ ಜೊತೆ ಹೋದೆ. ಒಂದು ದೋಣಿ ನದಿಯ ಸಂಗಮದ ಜಾಗಕ್ಕೆ ಕರೆದುಕೊಂಡು ಹೋಯಿತು. ಅಲ್ಲಿ ಬಟ್ಟೆ ಬದಲಿಸಲು ಒಂದು ತಡಿಕೆಯನ್ನು ಮಾಡಿದ್ದರು ದೋಣಿಯ ಮೇಲೆಯೇ. ನಾನೂ ನೀರಿನಲ್ಲಿ ಇಳಿದು ಮುಳುಗು ಹಾಕಿ ಬರುತ್ತೀನಿ ಅಂದುಕೊಂಡರೂ ಯಾಕೋ ಆಗುತ್ತಲೇ ಇರಲಿಲ್ಲ.
‘ದೇವಸನ್ನಿಧಿ’ ಅಂಕಣದಲ್ಲಿ ಕುಂಭಮೇಳಕ್ಕೆ ಭೇಟಿ ನೀಡಿದ ಅನುಭವದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಮಸಲ್‌ ಮೆಮೊರಿ ಮತ್ತು ನಾವು….

ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ