Advertisement

Tag: ಕತೆ

ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ

ಬತ್ತಿ ಹೋಗಿರುವ ನದಿಯ ದಡದಲ್ಲಿ ಕುಳಿತು ಹರಿಯುವ ನದಿಯನ್ನು ಕಲ್ಪಿಸಿಕೊಂಡು ಸುಖಪಡುತ್ತಿದ್ದ ಕುಮದ್ವತಿಗೆ, ಎಲ್ಲವೂ ವೇಗವಾಗಿ ಮನಸಿನಲಿ ಸುಳಿದುಹೋದವು. ಕೆಲವು ಸಲ ಊರಿನವರ ಮಾತುಗಳಿಗೆ ಬೇಸರವಾದರೂ, ಪ್ರೀತಿಸುವ ಗಂಡನಿಂದ ಎಲ್ಲವೂ ಮರೆಯುತ್ತಿದ್ದಳು. ಸೊಸೆಯ ಒಳ್ಳೆಯತನ ಕಂಡಮೇಲೆ ಅತ್ತೆ ಇನ್ನೂ ಹತ್ತಿರವಾಗಿದ್ದರು. ಸೊಸೆಗೆ ಯಾವುದೇ ತೊಂದರೆ ಆಗದಂತೆ, ತನ್ನ ಮಗನಿಂದ ಅವಳಿಗೆ ಅನ್ಯಾಯ ಆಯಿತಲ್ಲ ಎನ್ನುವ ಪಾಪ ಪ್ರಜ್ಞೆಯಿಂದ ಸೊಸೆಯನ್ನು ಇನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.
ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ “ಕುಮದ್ವತಿ”

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

“ನಮ್ಮ ಅಸ್ತಿತ್ವ ಇರುವುದು ನಮ್ಮಿಂದ ಮಾತ್ರ ಅಲ್ಲ. ಸುತ್ತಲಿರುವವರ ಅಸ್ತಿತ್ವದಲ್ಲಿಯೂ ನಮ್ಮ ಅಸ್ತಿತ್ವ ಇದೆ. ಈಗ ನೋಡು, ನಾವು ಬದುಕಬೇಕಾದರೆ ಆಹಾರ ಸೇವಿಸಬೇಕು. ಆಹಾರ ಬೆಳೆಯುವ ರೈತನೇ ಇಲ್ಲದಿದ್ದರೆ ನಮಗೆ ಅಸ್ತಿತ್ವವೇ ಇಲ್ಲ. ನಾವೀಗ ತಿನ್ನುತ್ತಿರುವುದನ್ನು ಬೆಳೆದದ್ದು ಯಾರು ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು. ಆದರೆ ಆ ಗೊತ್ತಿರದ ವ್ಯಕ್ತಿಯೇ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುತ್ತಾನೆ. ಆ ರೈತನಿಗೂ ಕೂಡಾ ನಮ್ಮ ಅವಶ್ಯಕತೆ ಇರುತ್ತದೆ.”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಎರಡು ಹೃದಯ ಒಂದು ಜೀವ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು”

Read More

ಶ್ರೀಲೋಲ ಸೋಮಯಾಜಿ ಬರೆದ ಈ ಭಾನುವಾರದ ಕತೆ

ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು.
ಶ್ರೀಲೋಲ ಸೋಮಯಾಜಿ ಬರೆದ “ಮೊನಾಲಿಸಾಳ ನಗು” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ

ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಕೊ ಕ್ಕೊ ಕ್ಕೊ…” ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ