Advertisement

Tag: ಕೆಂಡಸಂಪಿಗೆ

ಮನೆ ಕಟ್ಟಿಸುವ ಗೋಜುಗಳು…: ಎಚ್.ಗೋಪಾಲಕೃಷ್ಣ ಸರಣಿ

ಮರದ ಪ್ರಾಬ್ಲಂ ಅಂದರೆ ಅದನ್ನು ಕೊಳ್ಳುವ ಮರದ ಅಂಗಡಿಯಲ್ಲಿ ಅದನ್ನು ಕತ್ತರಿಸುವ ಮತ್ತು ಅದನ್ನು ಸಾಗಿಸುವ ಒಂದು ದೊಡ್ಡ ತಲೆನೋವು ನಿವಾರಣೆ ಈ ಒಂದು ನಡೆಯಿಂದ ಅಂದರೆ ಸಿಂಗಲ್ ಸ್ಟ್ರೋಕ್‌ನಿಂದ ಆಗಿತ್ತು. ಆಗಿನ ಸಂದರ್ಭದಲ್ಲಿ ಮನೆಯ ಮರ ಮುಟ್ಟುಗಳ ವ್ಯಾಪಾರ ಹೇಗೆ ನಡೆಯುತ್ತಿತ್ತು ಎಂಬುದರ ಒಂದು ಕಿರು ಪರಿಚಯ ನಿಮಗೆ ಮಾಡಲೇ ಬೇಕು, ಕಾರಣ ಎಂತಹ ಮ್ಯಾಥ ಮಟಿಕ್ಸ್ ಜೀನಿಯಸ್‌ಗಳೂ ಹೇಗೆ ತಲೆಕೆಟ್ಟು ಗಬ್ಬೆದ್ದು ಹೋಗುತ್ತಾರೆ ಎಂದು ಒಂದು ಅರಿವು ಮೂಡಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತಾರನೆಯ ಕಂತು

Read More

ಇದ್ದಷ್ಟು ಇರಲಿ…: ಎಸ್ ನಾಗಶ್ರೀ ಅಜಯ್ ಅಂಕಣ

ತೀರ ಅತಿಯೆನಿಸುವಷ್ಟು ಅಲ್ಲದಿದ್ದರೂ ನಾವೆಲ್ಲರೂ ಒಂದಿಲ್ಲೊಮ್ಮೆ ಈಗಿರುವುದೇ ಚೆಂದ ಎಂದುಕೊಳ್ಳಲು ಆಸೆಪಟ್ಟವರೇ. ಬಡತನ, ಅನಾರೋಗ್ಯ, ಅಜ್ಞಾನಗಳನ್ನು ರಮ್ಯವಾಗಿ ಚಿತ್ರಿಸುತ್ತಾ ಪರಿಶ್ರಮದಿಂದ ಮೇಲೇರಿದವರ ಸಾಧನೆಯನ್ನು ಕಡೆಗಣಿಸಿ ಮಾತನಾಡುತ್ತಾ ಹುಸಿ ಆನಂದ ಹೊಂದಿದವರೇ. ಬಹಳಷ್ಟು ಸಲ ಎದುರಿನವರ ಮೂಗಿನ ನೇರಕ್ಕೆ ಮಾತನಾಡಿ ‘ಒಳ್ಳೆಯವರಾಗಿ’ ಕಾಣುವ ಆಸೆಯೇ ಡೋಂಗಿಗಳ ಬಡಾಯಿಗೆ ಜೈಹೋ ಎನ್ನುವಂತೆ ಮಾಡಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

Read More

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಆವಾಗಾವಾಗ ರಾತ್ರಿಗಳಲ್ಲಿ ತಾವಿಬ್ಬರೂ ಮೈಗೆ ಮೈ ಬೆಸೆದುಕೊಂಡು ತಾನು ಎಡದಿಂದ ಅವಳು ಬಲದಿಂದ ಎಷ್ಟೊತ್ತಿನವರೆಗೆ ಚುಕ್ಕೆಗಳೆಣಿಸಿದರೂ ಇಬ್ಬರೂ ಬಂದು ಒಂದುಕಡೆ ಸೇರದ ಆಟಕ್ಕೆ ಈಗ ಬೇರೆಯದೇ ಅರ್ಥ ಕಾಣಿಸಿ ಇದೆಲ್ಲ ಎಲ್ಲಿಹೋಗಿ ಮುಟ್ಟುವುದೋ ಎಂದು ಅಯೋಮಯಗೊಳ್ಳುವನು. ಹೀಗೆ ಇಲ್ಲಸಲ್ಲದ ಯೋಚನೆಗೀಡಾದವನು ದಾರಿತಪ್ಪಿದವನಂತೆ ಎಡವುತ್ತ ಮತ್ತೊಂದು ರಾತ್ರಿಯನ್ನು ತುಳಿಯುತ್ತ ತಳ್ಳುವನು. ಬಗ್ಗಡದ ಬದುಕು ಟಿಸಿಲೊಡೆವ ಸೂಚನೆ ಕಂಡು ಮಲಗಿದಲ್ಲೇ ಬಿರುಕು ಬಿಡುವನು.
ಲಕ್ಷ್ಮಣ ಶರೆಗಾರ ಕಥಾ ಸಂಕಲನ “ತಿದಿಯ ತುದಿಗೆ ಬೆಂಕಿಯ ಉಗುಳು” ಕೃತಿಯ “ಉಧೋ ಉಧೋ” ಕತೆ

Read More

ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್.‌ ಅನಂತಮೂರ್ತಿ ಮುನ್ನುಡಿ

Read More

ಅರ್ಥವಾಗದ ವಯಸ್ಸು ಏನೆಲ್ಲ ಮಾಡಿಸುತ್ತದೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಅಯ್ಯಪ್ಪ ಮತ್ತೆ ಹೊರಕ್ಕೆ ಬಂದು ಕಲ್ಲು ಬಂಡೆಯ ಮೇಲೆ ಕುಳಿತುಕೊಂಡು ಅಂಗೈಯಿಂದ ಜೋರಾಗಿ ಕಲ್ಲು ಬಂಡೆಗೆ ಹೊಡೆದು ಕೈಕೈ ಹಿಸುಕಿಕೊಂಡರು. ರಾತ್ರಿ ಊಟದ ಸಮಯವಾಗಿ ವಿಜಯ ಊಟದ ತಟ್ಟೆ ಮತ್ತು ನೀರು ಅಯ್ಯಪ್ಪನಿಗೆ ತಂದುಕೊಟ್ಟು ಬಾಗಿಲು ಮುಂದೆ ಕೆಳಗಡೆ ಕುಳಿತುಕೊಂಡಳು. ಅಯ್ಯಪ್ಪ ಊಟ ಮಾಡುತ್ತ, “ಈ ಹುಡುಗಿ ಕಾಲೇಜ್ ಓದು ಮುಗಿದಂತೆಯೇ. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಇದುವರೆಗೂ ಯಾರೂ ಓದಿರಲಿಲ್ಲ. ಈ ಹುಡುಗಿಯನ್ನಾದರೂ ಚೆನ್ನಾಗಿ ಓದಿಸೋಣ ಅಂದುಕೊಂಡಿದ್ದೆ” ಎಂದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ