Advertisement

Tag: ಪ್ರವಾಸ

ದಿವಾನಿಯಾದ ಮಸ್ತಾನಿಯ ಕತೆ

ಹೌದಲ್ಲ. ಇವಳು ಎಲ್ಲಿಂದ ಬಂದಳು ಎಲ್ಲಿಗೆ ಹೋದಳು? ಸಂಜಯ್ ಲೀಲಾ ಬನ್ಸಾಲಿಯ ವೈಭವಪರದೆಯಲ್ಲಿ ದೀಪಿಕಾಳ ಮೂಲಕ ಅನಾವರಣಗೊಂಡವಳು.. ಕೊಟ್ಟಿಗೆಯಂತಾಗಿದ್ದ ಮನದ ನಡುವಿನಲ್ಲಿ ನೊರೆ ಹಾಲ್ಗರೆದುಕೊಟ್ಟ, ಬಾಜಿರಾಯನ ‘ಮಸ್ತಾನಿ’ಯನ್ನು ಹುಡುಕಿ ನಾನು ಹೊರಟೆ. ಹಾಡುತ್ತಿದ್ದೆ ನಾನೂ “ಕಹತೆ ಹೆ ಯೇ ದಿವಾನಿ ಮಸ್ತಾನೀ ಹೋಗಯೀ…” ಅವಳು ಇರಲೇ ಇಲ್ಲ, ಅವಳು ಮುಸ್ಲಿಂ ಆಗಿರಲಿಲ್ಲ, ಅವಳು ಬಾಜಿರಾಯನಿಗಿಂತ ಮೊದಲೇ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳು ವಗೈರೆ ವಗೈರೆ ಎಂದು ಮಾಧ್ಯಮಗಳು ಟಿಆರ್‌ಪಿ ಸಂಕಷ್ಟದಲ್ಲಿ ಹೊರಳಿ ಧುಮ್ಮಿಕ್ಕುತ್ತಿರುವಾಗ ನಾನು ಹಾಡುತ್ತಿದ್ದೆ “ಜ಼್ಅಖಮ್ ಐಸ ತೂನೇ ಲಗಾಯಾ… ಮರ್ಹಮ್ ಐಸ ತೂನೇ ಲಗಾಯಾ… ಮೇ ದಿವಾನಿ ಹೋಗಯೀ… ಹಾಂ ದಿವಾನೀ ಹೋಗಯೀ” ಅಂಜಲಿ ರಾಮಣ್ಣ ಬರೆಯುವ `ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಹೊಸ ಬರಹ

Read More

`ಜಗದ ಜಗಲಿಯಲಿ ನಿಂತು’: ವೈಶಾಲಿ ಪ್ರವಾಸ ಲೇಖನ ಮಾಲೆ ಆರಂಭ

ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಅಂಕಣದ ಮೊದಲ ಬರಹ ಇಲ್ಲಿದೆ

Read More

ಹಿಮಹಾಸಿನ ಮೇಲೆ ಚುಕ್ಕಿ ಎಣಿಸಿದ ಖುಷಿ

ಚಾರಣ ಪ್ರಾಂಭವಾದ ಸುಮಾರು ಒಂದು ಘಂಟೆಯ ನಂತರ ಎಲ್ಲರನ್ನೂ ಹಿಮದ ಮೇಲೆ ಮಲಗಿ ಸುಧಾರಿಸಲು ಹೇಳಿದ ನಮ್ಮ ಗೈಡ್ ಇನ್ನೊಂದು ಸೂಚನೆಯನ್ನೂ ಕೊಟ್ಟರು. ಕಣ್ಣು ಮುಚ್ಚಿ ಮೌನವನ್ನು ಆನಂದಿಸಬೇಕು. ಅಲ್ಲಿಯವರೆಗೂ ಗಿಜಿ ಗಿಜಿ ಎನ್ನುತ್ತಿದ್ದ ಗುಂಪು ತಕ್ಷಣ ಮೌನವಾಯಿತು. ಮೌನ ಆಚರಿಸಿ ಅಂತರ್ಮುಖಿಯಾಗುವುದೊ ಅಥವಾ ಕಣ್ಣಿನ ಮೇಲಿರುವ ತಾರಾಗಣವನ್ನು ಲೆಕ್ಕ ಹಾಕುವುದೋ ಎನ್ನುವ ಗೊಂದಲ. ಗುರುದತ್ ಅಮೃತಾಪುರ ಪ್ರವಾಸ ಕಥನ

Read More

ಕರೆಂಟು ಬಂದರೆ ಆರೋಗ್ಯ ಹಾಳಾಗುತ್ತಾ?

‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್‌ಳ ಸ್ಟೈಲ್‌ನಲ್ಲೇ ಶಾಹಿದ್‌ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ ಕಾರಣ ನನ್ನ ವಾಚಾಳಿತನ!

Read More

ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ ಇಂದು ಆರಂಭ

ಸದಾ ಹೊಸ ನೋಟವನ್ನು ಕೊಡುವ ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಬೆಟ್ಟಗಳನ್ನು ಏರುವುದು, ಹೊಸ ಜನರ ಭೇಟಿ ಮಾಡುವುದು,  ವಿವಿಧ ಪ್ರದೇಶಗಳ ಹಿನ್ನೆಲೆ ಅರಿಯುವುದೆಂದರೆ ಅಂಜಲಿ ರಾಮಣ್ಣ ಅವರಿಗಿಷ್ಟ. ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳಾ ಹಕ್ಕುಗಳ ಬಗ್ಗೆ ನಿಖರವಾದ ನಿಲುವುಗಳನ್ನು ಹೇಳಬಲ್ಲ ಅವರು, ತಮ್ಮ ಸೂಕ್ಷ್ಮ ಒಳನೋಟಗಳನ್ನು ‘ಫ್ಯಾಮಿಲಿ ಕೋರ್ಟ್ ಕಲಿಕೆ’ ಎಂಬ ಶೀರ್ಷಿಕೆಯಡಿ ಮಂಡಿಸುವುದುಂಟು. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ