ಕಪ್ಪುಹಲಗೆಯ ಮೇಲಿನ ಬಣ್ಣದ ಅಕ್ಷರಗಳು…: ಆಶಾ ಜಗದೀಶ್ ಪ್ರಬಂಧ
ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್ ಪ್ರಬಂಧ ನಿಮ್ಮ ಓದಿಗೆ