Advertisement

Tag: Dr. LG Meera

ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ

Read More

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

Read More

ಸಮರ್ಥ ಕೆಲಸದ ಗುಟ್ಟು… ಎಂದಾದರೂ ಆದೀತೇ ರಟ್ಟು?: ಎಲ್.ಜಿ.ಮೀರಾ ಅಂಕಣ

ಆ ಇಬ್ಬರು ಹಿರಿಯ ಅಧ್ಯಾಪಕಿಯರ ಮುಖ ನೋಡಿದೆ. ಅವರಲ್ಲೊಬ್ಬರು `ಹೇ… ಸುಲಭ ಇದು. ನೋಡಿ, ಒಬ್ರು ಈ ಕಡೆ, ಇನ್ನೊಬ್ರು ಆ ಪಕ್ಕದ ಕುರ್ಚೀಲಿ ಕೂತ್ಕೊಳಿ. ನಾನು ಇಲ್ಲಿ ಕೂತ್ಕೋತೀನಿ. ನೂರರಿಂದ ಶುರುವಾಗೋ ಅರ್ಜಿ ಎಲ್ಲಾ ನೀವು ತಗೊಳ್ಳಿ, ಇನ್ನೂರರಿಂದ ಶುರುವಾಗೋದು ನೀವು, ಮುನ್ನೂರರಿಂದ ಶುರುವಾಗೋದು ನಾನು ತಗೋತೀನಿ.. ಬೇಗ ಬೇಗ ಇವುಗಳನ್ನ ನಾವು ಪ್ರತ್ಯೇಕ ಮಾಡ್ಬಹುದು’ ಅಂದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತಾರನೆಯ ಬರಹ

Read More

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

Read More

ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ