Advertisement

Tag: essay

ಝಂಡಾ ಊಂಚಾ ಬಿಟ್ಟು.. ಘಮಘಮಿಸುವ ಊಟದ ಹಿಂದೆ ಹೊರಟೂ…

ಮೌಂಟ್ ಅಬುನಲ್ಲಿನ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇರುತ್ತೆ ಅಂತ ಯಾರೋ ಹೇಳಿದ್ದರು. ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇದ್ದರೆ ದೇವರನ್ನ ಯಾವಾಗ ನೋಡೋದು ಅನ್ನುವ ಸಂಶಯ ಹುಟ್ಟಿತ್ತು. ನನ್ನಾಕೆ ಒಂದು ಮೊಟಕು ಕೊಟ್ಟು ಇಪ್ಪತ್ನಾಲ್ಕು ಗಂಟೇನೂ ತಿಂತಲೇ ಕೂಡು ಹಾಗಿಲ್ಲ ಅಂತ ಭೋಜನ ಶಾಲೆಯಿಂದ ಆಚೆಗೆ ದರ ದರ ಎಳೆದುಕೊಂಡು ಹೋಗಿದ್ದಳು. ಊಟಕ್ಕೆ ಅಲ್ಲೂ ಚಪಾತಿ, ಅದಕ್ಕೆ ನೆಂಚಿಕೊಳ್ಳೂಕ್ಕೆ ಅದೇನೋ ಒಂದು.
ಎಚ್. ಗೋಪಾಲಕೃಷ್ಣ ಬರೆದ ಹಾಸ್ಯ ಪ್ರಬಂಧ ನಿಮ್ಮ ಓದಿಗೆ

Read More

ಮುದ್ದೆಯಾದ ಕಾಗದ!

ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು.
ಶರಣಗೌಡ ಬಿ ಪಾಟೀಲ ತಿಳಗೂಳ ಪ್ರಬಂಧ

Read More

ನಾನೂ ವಿದ್ಯುತ್ ತಯಾರಿಸಿದೆ!

ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ.  ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಂದು ಯೋಚಿಸುವಾಗ ವಿದ್ಯುತ್ ತಯಾರಿಸುವ ಯೋಚನೆ ಮನಸ್ಸಿಗೆ ಬಂತು. ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಪ್ರಬಂಧ  ಇಲ್ಲಿದೆ. 

Read More

ನಮ್ಮೂರ ಆಸ್ಪತ್ರೆಯ ನೆನಪುಗಳು

ನಾನೆಷ್ಟೇ ಬೇಡವೆಂದುಕೊಂಡರೂ ನಮ್ಮ ಶಾಲೆಯ ಕಡೆಯಿಂದ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ಯುತ್ತಿದ್ದರು. ಸಾಲದ್ದಕ್ಕೆ ಅದು ಬೇರೆ ಚುಚ್ಚುಮದ್ದುಗಳ ಕಾಲ! ಸರ್ಕಾರೀ ಶಾಲೆಯಾದ್ದರಿಂದ, ಸರ್ಕಾರದ್ದೇ ನಿರ್ದೇಶನದ ಮೇರೆಗೆ ಹೇಳದೇ ಕೇಳದೇ ನಮ್ಮನ್ನು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ನಡೆಸಿಕೊಂಡುಹೋಗಿ ವೈದ್ಯರ ಕೋಣೆಯ ಹೊರಗೆ ಸಾಲಾಗಿ ನಿಲ್ಲಿಸಿಬಿಡುತ್ತಿದ್ದರು. ನನಗಂತೂ ಈ ಇಂಜಕ್ಷನ್ ಎಂದರೆ ಇನ್ನಿಲ್ಲದ ಭಯ. ಎಂದಿನಂತೆ ನಡೆಯುತ್ತಿದ್ದ ತರಗತಿಯ ಮಧ್ಯೆ ಇದ್ದಕ್ಕಿದ್ದಂತೆ ಒಳಪ್ರವೇಶಿಸಿದ ಮುಖ್ಯಶಿಕ್ಷಕರು ‘ಎಲ್ಲರೂ ಸಾಲಾಗಿ ಆಸ್ಪತ್ರೆಯ ಕಡೆ ನಡೆಯಿರಿ. ಯಾರೂ ಗಲಾಟೆ ಮಾಡಬಾರದು’ ಎಂದು ಉಗ್ರ ದನಿಯಲ್ಲಿ ಘೋಷಿಸಿಬಿಟ್ಟರು.

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ