ಬೆಂಗಳೂರು ಮತ್ತು ನೀರು ಸರಬರಾಜು ವ್ಯವಸ್ಥೆ: ಎಚ್. ಗೋಪಾಲಕೃಷ್ಣ ಸರಣಿ
ಗಂಡಸರು ಆಗ ನೀರು ಹಿಡಿಯಲು ಕಬ್ಬಿಣದ ಬಕೆಟ್ ತರುತ್ತಿದ್ದರು. ಅದನ್ನು ಎತ್ತಿ ಒಯ್ಯುವುದು ಗಂಡಿಗೆ ಸುಲಭ. ಆದರೆ ಹೆಂಗಸರಿಗೆ ಇದು ಸರಿ ಬಾರದು. ಕಾರಣ ಬಕೆಟ್ ಕಾಲಿಗೆ ತೊಡರುವುದು. ನಮ್ಮ ಮನೆಗೆ ಬೀದಿ ನಲ್ಲಿಯಿಂದ ನೀರು ಹೊತ್ತು ತರುವ ಕೆಲಸ ಎರಡನೇ ಅಣ್ಣ ರಾಜು ಮಾಡುತ್ತಿದ್ದ. ದಷ್ಟ ಪುಷ್ಟವಾಗಿ ಬೆಳೆದಿದ್ದ ಅವನು ತಲಾ ಮೂವತ್ತು ಲೀಟರ್ ಹಿಡಿಸುವ ಎರಡು ಕಬ್ಬಿಣದ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಒಂದೊಂದು ಕೈನಲ್ಲಿ ಒಂದೊಂದು ಬಕೆಟ್ ಹಿಡಿದು ನೀರು ತರುತ್ತಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ