Advertisement

Tag: Julekha Begum

ಮತ್ತೊಮ್ಮೆ ಒಡೆಯಿತು ಹೃದಯ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೊಂದನೆಯ ಕಂತು

Read More

ಕನಸು, ಕನವರಿಕೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಬಹುವಾಗಿ ಇಷ್ಟಪಡುತ್ತಿದ್ದ ಜುಬೇದಾಬಾಯಿ, ನನ್ನನ್ನು ಕಂಡೊಡನೆ ‘ಎಷ್ಟು ಕ್ಯೂಟ್ ಅಯ್ತಲ್ಲ ಈ ಹುಡ್ಗಿ!’ ಎಂದು ಕೆನ್ನೆಗಿಂಡಿ, ಮುತ್ತಿಟ್ಟರು. ಕಳೆದುಹೋದೆ; ಆಕಾಶಕ್ಕೇರಿಬಿಟ್ಟೆ. ಆವತ್ತಿಡೀ ಕೆಳಗಿಳಿದಿದ್ದರೆ ಕೇಳಿ. ಹೇಮರೆಡ್ಡಿ ಮಲ್ಲಮ್ಮ ನಾಟಕವೆಂದರೆ ನನಗೂ ಉತ್ಸಾಹ ಹೆಚ್ಚಿರುತ್ತಿತ್ತು. ಏಕೆಂದರೆ ಅದೊಂದೇ ನಾಟಕದಲ್ಲಿ ನನಗೆ ವೇದಿಕೆಯೇರುವ ಅವಕಾಶ ಸಿಗುತ್ತಿದ್ದದ್ದು. ಮದುವೆ, ಉಡಿ ತುಂಬುವ ಗುಂಪು ದೃಶ್ಯಗಳಲ್ಲಿ ನಾನೂ ಇರುತ್ತಿದ್ದೆ. ಗುಂಪೋ ಪ್ರತ್ಯೇಕವೋ, ಜನ ನನ್ನ ನೋಡಿ ಗುರುತಿಸುತ್ತಾರೋ ಇಲ್ಲವೋ, ನನಗೆ ಇವೆಲ್ಲವೂ ಗೌಣ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೊಂದನೆಯ ಕಂತು

Read More

ಬಣ್ಣ ಹಚ್ಚುವ ಆಸೆಯೂ… ನನ್ನ ಅರಣ್ಯರೋಧನವೂ: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂಬತ್ತು ವರ್ಷದವಳಾದ ನನ್ನ ಕೈ ಬೆರಳುಗಳು ಇನ್ಹೇಗೆ ಇರುತ್ತದೆ ಹೇಳಿ! ಎಳೆಯ ಕೈಗಳಿಂದಲೇ ಆದಷ್ಟು ತೊಳೆದೆ. ಅವರಿಗೆ ಸಮಾಧಾನ ನೀಡಲಿಲ್ಲ. ‘ಆಯ್ತು, ಪರವಾಗಿಲ್ಲ ಇನ್ನೊಂದು ಅವಕಾಶ’ ಎಂದು ನಾಟಕದ ಕರಪತ್ರ ಕೊಡುವುದಕ್ಕೆ ಮತ್ತೆ ಅಂಟಿಸುವುದಕ್ಕೆ ಹೋಗೆಂದರು. ಇರುವ ಕೆಲಸಗಳನ್ನು ಬೇಗ ಮುಗಿಸಿ, ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆ. ‘ನಮ್ ನಾಟ್ಕಕ್ ಬನ್ರಿ’ ಎಂದು ಕೂಗಿ, ಕರೆದು ಹೆಚ್ಚುವರಿ ಕೆಲಸಗಳನ್ನೂ ಮಾಡುತ್ತಿದ್ದೆ. ಗೌರಿ ಪಾತ್ರವನ್ನು ಕಂಡು ಕಂಡು, ಸಂಭಾಷಣೆಗಳೆಲ್ಲ ಬಾಯತುದಿಯಲ್ಲೇ ಇತ್ತು. ಅಷ್ಟೇ ಅಲ್ಲ, ಪಾತ್ರಕ್ಕೆ ಬೇಕಾದ ವೈಯ್ಯಾರವನ್ನೂ ಮಾಡುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

Read More

ಕಳ್ಳರು ಹಾಕಿದ ಕೊಡಲಿಯೇಟು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಮ್ಮೆ ಆಡುತ್ತಾ, ಮನೆಗೆ ಬರುವುದು ತಡವಾಯಿತು. ಬಾಗಿಲೆದುರು ಬಂದು ನಿಂತೊಡನೆ, ಅವ್ವ ಸಿಟ್ಟಿನಿಂದ ನನ್ನ ಬಟ್ಟೆಯನ್ನೆಲ್ಲ ಬಿಚ್ಚಿ ಒಳಗೆಸೆದು, ‘ಈಗ್ ಹೋಗು. ನೋಡಾನ’ ಎಂದಿದ್ದಷ್ಟೇ ಅಲ್ಲ, ದಢಾರನೇ ಬಾಗಿಲನ್ನೂ ಮುಚ್ಚಿದಳು. ಆ ವಯಸ್ಸಿಗೆ ಅವ್ವ ತೋರುತ್ತಿದ್ದ ಪ್ರೀತಿಯ ಕದವೂ ಮುಚ್ಚಿದಂತೆನಿಸಿತು. ಈಗೆಲ್ಲಿಯಾದರೂ ಜೀವನದಲ್ಲಿ ಕಳೆದ ಘಟನೆಯೊಂದನ್ನು ಅಳಿಸಿಹಾಕುವ ಅವಕಾಶ ಸಿಕ್ಕರೆ ಬಹುಶಃ ಇದಕ್ಕೇ ಬಳಸಿಕೊಳ್ಳುತ್ತೇನೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ