ಆಧುನಿಕ ವಿಕಾರಕ್ಕೊಂದು ಕನ್ನಡಿ: ಕಾವ್ಯಾ ಕಡಮೆ ಕಥಾ ಸಂಕಲನಕ್ಕೆ ಶ್ರೀಧರ ಬಳಗಾರ ಮುನ್ನುಡಿ
ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ