Advertisement

Tag: Kannada Story

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ

ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಬರೆದ ಕಥೆ

“ಸರ್ಕಾರಿ ಕೆಲಸ ಬಿಟ್ಟು ಮಗ ತನಗೆ ನಿರಾಸೆ ಮಾಡಿದಾಂತ ಕೊರಗಿ ನನ್ನಪ್ಪ ಸತ್ತನೋ ಅಥವಾ ಎಂದೋ ತೀರಿಕೊಂಡ ಹೆಂಡತಿಯ ನೆನಪು ಕಾಡಿದ್ದು ಹೆಚ್ಚಾಗಿ ಸತ್ತನೋ ಅಥವಾ ಕುಡಿತದ ದಾಸನಾಗಿ ಸತ್ತನೋ ನನಗರ್ಥ ಆಗಲಿಲ್ಲ. ಆದರೂ ಲೋಕಜ್ಞಾನ ಇರೋ ಮಗನ ನಿರ್ಧಾರ ಇಳಿವಯಸ್ಸಿನ ತಂದೇನ ಇಷ್ಟೆಲ್ಲ ಕಂಗೆಡಿಸಲಿಕ್ಕೆ ಸಾಧ್ಯಾನಾ? ಇದಂತೂ ನನಗೆ ಬಗೆಹರೀಲೇ ಇಲ್ಲ….”

Read More

ಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್: ಅಬ್ದುಲ್ ರಶೀದ್ ಬರೆದ ಹೊಸ ಕಥೆಯ ಪೂರ್ಣರೂಪ

“ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು.”

Read More

ಓಬಿರಾಯನಕಾಲದ ಕಥಾರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕಥೆ

“ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ