Advertisement

Tag: kendasampige

ನೆದರ್ಲ್ಯಾಂಡ್ಸ್‌ ಕಟ್ಟಿಕೊಟ್ಟ ಮರೆಯಲಾಗದ ನೆನಪುಗಳು…

ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್‌ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 60ನೇ ಕಂತು ನಿಮ್ಮ ಓದಿಗೆ.

Read More

ಉತ್ತಮ ಪೂರ್ವಜರಾಗುವುದು ಹೇಗೆ?

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಗುಮ್ಮನಿಂದಲೂ ಚಾಕೋಲೇಟ್‌ ಕೊಡಿಸುವ “ಕಾರ್ನಿವಲ್” ಹಬ್ಬ…

ಅಕ್ಟೋಬರ್‌ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಮಧ್ಯರಾತ್ರಿ ಗೇಟ್‌ ಸದ್ದೇಕಾಯಿತು…?

ಒಂದು ಭಾನುವಾರ ಪರೀಕ್ಷೆಗಳಿಗೆ ರಜೆ ಇತ್ತು. ನಮ್ ಇಡೀ ಓಣಿಯಲ್ಲಿಯೇ ಗುಸು‌ ಗುಸು ಆರಂಭವಾಗಿತ್ತು. ರಾತ್ರಿ ಎರಡರ ಸುಮಾರಿಗೆ ಗೇಟಿನ ಸದ್ದಾಯಿತೆಂದೂ… ಯಾರೋ ಕಾಂಪೌಂಡಿನಲ್ಲಿ ಓಡಾಡುತ್ತಿದ್ದುದನ್ನು ನೋಡಿರುವುದಾಗಿ ಅವರು ಮನೆಯ ಸದಸ್ಯರೆಲ್ಲರೂ ಕಣ್ಣಾರೆ ನೋಡಿರುವುದಾಗಿ ಮನೆ ಮನೆಯಲ್ಲೂ ಈ ಸುದ್ದಿ ಹಬ್ಬಿ ಇಡೀ ವಠಾರವೇ ಹೆದರಲಾರಂಭಿಸಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ ನಿಮ್ಮ ಓದಿಗೆ

Read More

ಇರುವ ಶಾಂತಿಯನ್ನು ಉಳಿಸಿಕೊಳ್ಳೋಣ

ಸ್ವರ್ಗದ ಹಕ್ಕಿಯಾದ ನವಿಲು ತನ್ನ ಒಂದು ಸಣ್ಣತಪ್ಪಿನಿಂದ ಅಲ್ಲಾನ ಶಾಪಕ್ಕೆ ಗುರಿಯಾಗಿ ಭೂಮಿಗೆ ಬಂದರೂ ಅವುಗಳು ನೆಲೆಸಿರುವಲ್ಲಿ ಶಾಂತಿ ಸಮಾಧಾನ ನೆಲೆಯೂರುತ್ತದೆ. ಭಾರತ ಮೊದಲನೆಯ ಅಣುಬಾಂಬಿನ ಪರೀಕ್ಷೆಯನ್ನು ಪ್ರೋಖರಾನಿನಲ್ಲಿ ನಡೆಸಿದಾಗ ಅವುಗಳೆಲ್ಲವೂ ಬೆಚ್ಚಿಬೀಳುತ್ತವೆ. ಅಲ್ಲಿ ಅವುಗಳು ಕಾಣಸಿಗುವುದಿಲ್ಲ. ಕಾಣೆಯಾಗಿರುವ ನವಿಲುಗಳಿಗಾಗಿ ನಾಟಕಕಾರ ಪತ್ರಿಕೆಯಲ್ಲಿ ಬರೆದು ಜಾಗೃತಿ ಮೂಡಿಸುವ ಪ್ರಯತ್ನಮಾಡಿತ್ತಾನೆ. ಶಾಂತಿನೆಲೆಸುವುದು ಆತನ ಹಂಬಲ.
ಪ್ರೊ. ಕೆ. ಇ. ರಾಧಾಕೃಷ್ಣ ಅನುವಾದಿತ ಸುರೇಶ ಆನಗಳ್ಳಿ ನಿರ್ದೇಶನದ “ನವಿಲು ಪುರಾಣ” ನಾಟಕದ ಕುರಿತು ನಾರಾಯಣ ಯಾಜಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ