Advertisement

Tag: kendasampige

ಲುಪ್ತವಾಗಿ ಹೋದ ‘ಪ್ರಸಂಗ ಕಥಾಸಾರ’ ಕುರಿತ ವಿಚಾರಗಳು

ಹಿಂದಿನ ಕಾಲದಲ್ಲಿ ಭಾಗವತರು ಪ್ರಸಂಗದ ಮೊದಲಿನಿಂದ ಕೊನೆಯವರೆಗಿನ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡೇ ತಯಾರಾಗಿರಬೇಕಾಗಿತ್ತು. ಇಂತಹಾ ಆದಿಯ ಪದ್ಯಗಳಿಗೆ ಕಥಾಸಾರ ಎಂಬ ಹೆಸರು. ಇದನ್ನು ಕಥಾನುಸಾರವೆಂದೂ ಕರೆಯುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಾಲ ಮತ್ತು ಅದಕ್ಕೂ ಮೊದಲು ಪ್ರಸಂಗದ ಕಥಾಸಾರವನ್ನು ಪ್ರದರ್ಶನದ ವೇಳೆ ಕೈ ಬಿಡುವ ಪದ್ಧತಿ ಇರಲಿಲ್ಲ.ಸದ್ಯದ ಸಂದರ್ಭ ಕಥಾಸಾರ ಅಂದರೇನೆಂಬುದೇ ಅರಿವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

Read More

ಕನ್ನಡವೆಂದರೆ ಕುಣಿದಾಡುವುದೆನ್ನೆದೆ..

ಚಿತ್ರ ಬಿಡಿಸುವ ಮಕ್ಕಳನ್ನು ಚಿತ್ರಕಲಾ ಶಾಲೆಗೆ ಸೇರಿಸಬೇಕು ಎನ್ನುವ ಜ್ಞಾನ ಈಗಲೂ ಬಹುತೇಕ ಪಾಲಕರಿಗೆ ಇಲ್ಲ. ಆದರೆ ಚಿತ್ರಕಲೆ ಗೊತ್ತಿದ್ದವರನ್ನು ಸೈನ್ಸ್ ವಿಭಾಗಕ್ಕೆ ಸೇರಿಸುವುದಕ್ಕೆ, ಇಮಾಮ್ ಸಾಬಿ ಮತ್ತು ರಾಮನವಮಿಯ ಸಂಬಂಧ ಎನ್ನಬಹುದು. ಅದೇ ರೀತಿಯಲ್ಲಿ ಇತ್ತೀಚಿನ ಕರ್ನಾಟಕದ ಬಹುತೇಕ ಪಾಲಕರು ಇಂಗ್ಲೀಷ್ ಭಾಷೆಯ ಕಲಿಕೆಯ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುತ್ತಾರೆ. ಮಾತನಾಡುವಾಗ ಮಧ್ಯೆ ಮಧ್ಯೆ ಇಂಗ್ಲೀಷ್ ಉಪಯೋಗಿಸಿದರೆ ಬುದ್ಧಿವಂತರೆಂದು ಗುರುತಿಸಿಕೊಳ್ಳುತ್ತಾರೆ. ಹಾಗಾಗಿ ಬೆಂಗಳೂರಿಗರ ಕನ್ನಡದಲ್ಲಿ ಕನ್ನಡವನ್ನು ಭೂತಗನ್ನಡಿ ಹಾಕಿ ಹುಡುಕಬೇಕು ಎಂದು ಕೆಲವರು ಕುಹುಕವಾಡುತ್ತಾರೆ.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

Read More

ಹಂಪ್ ಮೇಲೆ ಚೆಲ್ಲಿದ ರಕ್ತದ ಕಲೆಗಳ ಭಯ

ನನಗೆ ಆ ದಿನಗಳಲ್ಲಿ ಮಧ್ಯರಾತ್ರಿ ಹನ್ನೆರೆಡಕ್ಕೆ ಸರಿಯಾಗಿ ಎಚ್ಚರಾಗುತ್ತಿತ್ತು. ತಲೆ ತುಂಬ ರಗ್ಗು ಹೊದ್ದು ಕಣ್ಣು ಮುಚ್ಚಿಕೊಂಡರೂ ನಿದ್ರೆ ಬರುತ್ತಿರಲಿಲ್ಲ. ಸದಾ ಎಚ್ಚರವಾಗೆ ಇರುತ್ತಿದ್ದೆ. ಎದೆ ಕಂಪಿಸುತ್ತಿತ್ತು. ಅಲುಗಾಡದೆ ಮುದುರಿಕೊಂಡಿರುತ್ತಿದ್ದೆ. ವಿಶಲ್ ಊದುತ್ತಾ ಲಾಟಿ ಬಡಿಯುತ್ತ ಬರುವ ಗೂರ್ಖನ ಬೂಟುಗಾಲಿನ ಸದ್ದು ಕೇಳಿಸುತ್ತಿತ್ತು. ಸರಿಯಾಗಿ ಹನ್ನೆರೆಡು ಗಂಟೆಗೆ ರೈಲಿನ ಬೆಲ್ಲು ಢಣಗುಡುತ್ತಿತ್ತು. ರೈಲು ಬರುವ ಸದ್ದು ಕೇಳಿದ ತಕ್ಷಣ ನನ್ನ ಕಲ್ಪನೆಗಳು ಗರಿಗೆದರುತ್ತಿದ್ದವು.”

Read More

ಕಥನ ಶಕ್ತಿಯನ್ನು ಒಲಿಸಿಕೊಂಡ ಕನ್ನಡದ ಚೇತನ ತರಾಸು

ಬರೆದು ಬದುಕಿದ ಕನ್ನಡದ ಬೆರಳೆಣಿಕೆಯ ಲೇಖಕರರಲ್ಲಿ ತ.ರಾ.ಸು. ಕೂಡ ಒಬ್ಬರು. ಜೊತೆಗೆ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಲ್ಲಿ ಅವರು ಸದಾ ಮುಂದು. ಅವರಿಗೆ ಅದರ ಕುರಿತು ವ್ಯಸನವಿರಲಿಲ್ಲ ಬದಲಾಗಿ ಹೆಮ್ಮೆಯಿತ್ತು. ಬಾಳಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳನ್ನೇ ಅನುಭವಿಸಿದ  ಅವರು ಯಾವತ್ತೂ ಸುಖಕ್ಕಾಗಿ ಹಂಬಲಿಸಿದವರಲ್ಲ.”

Read More

ಅಣ್ಣ ನೆಟ್ಟ ದೇವರ ಮರ

ಅಪ್ಪನ ಕೆಮ್ಮುಗಳಲ್ಲಿ ಎರಡು ವಿಧಗಳಿದ್ದವು. ಒಂದು ಬೀಡಿ ದಮ್ಮಿನ ಕೆಮ್ಮು, ಇನ್ನೊಂದು ಎಚ್ಚರಿಕೆಯ ಕರಗಂಟೆಯ ಒಣಕೆಮ್ಮು. ಎರಡನೆಯ ಕೆಮ್ಮು ಒಂಥರ ನಮ್ಮಪ್ಪನ ಸಿಗ್ನಲ್ಲು ಕೂಡ ಆಗಿತ್ತು. ನಮಗೆಲ್ಲಾ ಆ ಕೆಮ್ಮಿನ ಧ್ವನಿಯ ಹಿಂದಿರುವ ಭಾಷೆ, ಭಾವಗಳು ತಕ್ಷಣಕ್ಕೆ ಗೊತ್ತಾಗಿ ಬಿಡುತ್ತಿದ್ದವು. ಅಪ್ಪ ಸಿಟ್ಟಿನಲ್ಲಿ ಇದ್ದಾರಾ? ಇಲ್ಲ ಒಳ್ಳೇ ಮೂಡ್ನಲ್ಲಿ ಬರ್ತಿದ್ದಾರಾ? ಎನ್ನುವುದು ತಿಳಿಯುತ್ತಿತ್ತು. ಜೊತೆಗೆ `ನಾನು ಬರುತ್ತಿದ್ದೇನೆ ಹೋಶಿಯಾರ್’ ಎಂಬ ಬೋಪರಾಕ್ ಕೂಡ ಆ ಕೆಮ್ಮಿನ ದನಿಯಲ್ಲಿ ಅಡಕವಾಗಿರುತ್ತಿತ್ತು. -ಕಲೀಮ್‌ಉಲ್ಲಾ ಬರೆದ “ಬಾಡೂಟದ ಮಹಿಮೆ” ಪ್ರಬಂಧ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ