ನೈದಿಲೆಯ ಒಡಲು: ನಾರಾಯಣ ಯಾಜಿ ಬರೆದ ಕತೆ
“ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ ಪೊಸೆಸಿವ್ ನೆಸ್ ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ.”
Read More