Advertisement

Tag: Poetry

ಭಾವುಕ ಕವಿಯ ಕಾವ್ಯಲೋಕ: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಜೊನಿನಾಸ್ ಅವರ ತಲೆಮಾರಿನವರಿಗೆ ಮುಖವಾಡಗಳೊಂದಿಗೆ ಆಟವಾಡುವುದು ಒಂದು ತರಹದ ಜೀವನಶೈಲಿಯಾಗಿತ್ತು. ಆಗ ಚಾಲ್ತಿಯಲ್ಲಿದ್ದ ಬೂದು ಬಣ್ಣದ ಉಡುಪುಗಳ ವ್ಯತಿರಿಕ್ತವಾಗಿ ಇವರು ಹಿಪ್ಪಿ ಮತ್ತು ಷೋಕಿಯ ಉಡುಪುಗಳಲ್ಲಿ ಸಾಂಕೇತಿಕ ಪ್ರಾಮುಖ್ಯತೆಯನ್ನು ಕಂಡರು. ಆಗಿನ ವ್ಯವಸ್ಥೆಯೊಳಗೆ ತಮ್ಮದೇ ಆದ ಸ್ವಾಯತ್ತ ಜಗತ್ತನ್ನು ಸೃಷ್ಟಿಸಲು ಪ್ರಯತ್ನಿಸಿದ ಪೀಳಿಗೆಯಿದು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಕನ್ನಡ ಕಾವ್ಯಮಾಲೆಯ ಕುಸುಮ: ಈರೆಳೆಯ ಕಿನ್ನರಿಯ

ಈರೆಳೆಯಿನಳವಳಿಸ
ಬಲ್ಲ ದನಿ ತಳಮಳಿಸ
ದಿಹುದೆ ಓರೆಳೆಗೆ ಸೆಳೆಯೆ?
ಅಮ್ಮುವುದೆ
ಇಮ್ಮಡಿಯ ನರಕೆ ತಳೆಯೆ?
ಮೇಣೊಂದೆ
ಕರೆಯಿಂದ ಹರಿವ ಹೊಳೆಯೆ?

Read More

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

ಅನ್ವೇಷಣೆ ನಿರತ ಅನವರತ ಚಿತ್ತಪಥದ ಕವಿತೆಗಳತ್ತ…

ನಿಜಾರ್ಥದ ಕವಿ ಗೊತ್ತಿರುವುದನ್ನು ವಿವರಿಸುವುದಿಲ್ಲ, ಅರ್ಥಮಾಡಿಕೊಂಡಿದ್ದನ್ನು ಅರ್ಥಮಾಡಿಸುತ್ತಾನೆ. ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಇಂದ್ರಕುಮಾರ್ ಎಚ್.ಬಿ. ಅವರ “ಬಾವಿಗ್ಯಾನವ ಮರೆತು” ಕವನ ಸಂಕಲನಕ್ಕೆ ಮಮತಾ ಆರ್. ಬರೆದ ಮುನ್ನುಡಿ

Read More

ಲಾಂಡೇಯ್: ಅಫ್ಘನ್ ಹೆಣ್ಣುಮಕ್ಕಳ ಅಕ್ಷರಸಮರ

ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ…

Read More

ಬರಹ ಭಂಡಾರ