Advertisement

Tag: Series

ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ

ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಜೈಲ್‌ನಿಂದ ಹೊರಬಂದ ಇಲಿ: ಕೆ.‌ ಸತ್ಯನಾರಾಯಣ ಸರಣಿ

ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ನಾಲ್ಕನೆಯ ಬರಹ ನಿಮ್ಮ ಓದಿಗೆ

Read More

ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆ’ ಇಂದಿನಿಂದ

‘ನಾನಿರೋದೇ ಹೀಗೇನೇ… ನಾನೇನೂ ಇದರಿಂದ ಕಲಿಯೋದಿಲ್ಲವೆಂದು ನಾವು ಅಹಮಿಕೆ ತೋರಿದೆವೋ, ಅಲ್ಲಿಗೆ ಮುಗೀತು ನಮ್ಮ ಬದುಕು! ಅದು ಕಬ್ಬಿಣದ ಕಡಲೆಯಂತಾಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯನ್ನು ಪಾಠ ಮಾಡಿ ಪರೀಕ್ಷೆ ಮಾಡ್ತಾರೆ! ಆದರೆ ಬದುಕು ಉಲ್ಟಾ. ಅದು ಪರೀಕ್ಷೆ ಮಾಡಿ ಪಾಠ ಕಲಿಸುತ್ತಾ ಹೋಗುತ್ತದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ಹೊಸ ಸರಣಿ ‘ಬದುಕು ಕುಲುಮೆʼ ಇಂದಿನಿಂದ

Read More

ವರ್ಷಕಾಲದಲ್ಲಿ ಸಂಭ್ರಮಾಚರಣೆಯ ಸಂಕಷ್ಟಗಳು: ಸುಮಾವೀಣಾ ಸರಣಿ

ನಮ್ಮ ಟೀಚರ್ಸ್ ಡೇ ಸೆಲೆಬ್ರೇಷನ್ನಿಗೂ ಮಳೆರಾಯ ತಪ್ಪದೆ ಹಾಜರಿ ಹಾಕುತ್ತಿದ್ದ. ಯಾವಾಗಲು ಸೆಪ್ಟೆಂಬರ್ 4 ರ ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿರುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ಉದ್ಘಾಟನೆ ಮೊದಲಾದ ಔಪಚಾರಿಕ ಕಾರ್ಯಕ್ರಮ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಹಾಡು ಕೇಳದಷ್ಟು ಜೋರು ಮಳೆ. ಮುಸಿ ಮುಸಿ ನಗುತ್ತಾ ಬರೆ ಡಾನ್ಸ್ ನೋಡುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ