Advertisement

Tag: Travelogue

ಮಾರ್ಟಿನ್ ಲೂಥರ್ ಕಿಂಗ್ ನೆನಪಿನಲ್ಲಿ ಹಾಕಿದ ಹೆಜ್ಜೆಗಳು

ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಪಂಜಾಬಿಗೆ ಹೋಗಿ ಲಸ್ಸಿ ಕುಡಿಯದಿರೆ ಮೆಚ್ಚನಾ ಪರಮಾತ್ಮನು

ಅಮೃತಸರ ಸಿಖ್ಖರ ಮುಖ್ಯ ಸ್ಥಳವಾದರೂ ಇಲ್ಲಿಂದ 11 ಕಿಲೋಮೀಟರ್ ದೂರದಲ್ಲಿ ಇದೆ ಲವ-ಕುಶರ ಜನ್ಮಸ್ಥಾನ. ಈಗ ಅದನ್ನು ರಾಮತೀರ್ಥ ಮಂದಿರ ಎಂದು ಗುರುತಿಸಲಾಗಿದೆ. ಅಲ್ಲೊಂದು ಸಣ್ಣ ಗುಡಿ ಇದೆ. ಅದರ ಮುಂದೆ ಕುಳಿತಿದ್ದ ಹಿರಿಯರೊಬ್ಬರು ‘ಇಲ್ಲಿಗೆ ಯಾರೂ ಬರುವುದೇ ಇಲ್ಲ ಅದಕ್ಕೇ ನಿತ್ಯ ಪೂಜೆಯೂ ಇಲ್ಲ’ ಎಂದರು. ಸಲಾಕೆಯಿಂದ ಮಾಡಿದ್ದ ಬಾಗಿಲಿಗೆ ಬೀಗ ಹಾಕಿತ್ತು. ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ

Read More

ಲ್ಯಾಪ್ಲ್ಯಾಂಡ್: ಒಂದು ಕನಸಿನ ಪಯಣ

ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

Read More

ಜೀವಂತ ಬೇರುಗಳ ಸೇತುವೆಯ ಮೇಲೆ ನಡೆಯುತ್ತಾ…

ಸದಾ ಮೇಲೆ ಅಲೆಯುತ್ತಿರುವ ಮೋಡ, ಕೆಳಗೆ ನೀರು ತುಂಬಿದ ಭೂಮಿ, ಬೀಳುವ ಸಮೃದ್ಧ ಮಳೆಯಿಂದಾಗಿ ದಟ್ಟವಾಗಿ ಬೆಳೆಯುವ ಕಾಡು ದೂರದಿಂದ ನೋಡಲು ರಮಣೀಯವೆನಿಸಿದರೂ ಅದರ ಸುತ್ತಲೂ ಜೀವನ ಕಟ್ಟಿಕೊಳ್ಳಲು ಕಠಿಣ ಸವಾಲೊಡ್ಡುತ್ತದೆ. ಆದರೆ ಮಾನವನ ಜೀವನ ಮಾಡುವ ತುಡಿತ ಎಂತಹ ಪ್ರಕೃತಿ ಸವಾಲುಗಳನ್ನೂ ಮೀರುತ್ತದೆ ಎನ್ನುವುದಕ್ಕೆ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಸಿ ಜನಾಂಗವೇ ಸಾಕ್ಷಿ. ಖಾಸಿಗಳ ಭಾಷೆ ಖಾಸಿ, ವಾಸಿಸುವ ಬೆಟ್ಟ ಖಾಸಿ.

Read More

ಗುರುದತ್ ಅಮೃತಾಪುರ ಬರೆವ ಹೊಸ ಸರಣಿ ಇಂದು ಆರಂಭ

ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ  ಇತಿಹಾಸವನ್ನೂ ಅರಿಯುವ ಕುತೂಹಲ  ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ