ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್. ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ
ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು. ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ.
ವೈ.ಎಸ್. ಹರಗಿ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ

