ನಿಯಂತ್ರಿಸುವ ಬುದ್ಧಿಯನ್ನು ನಿಯಂತ್ರಿಸೋಣವೇ?: ಮಾಲತಿ ಶಶಿಧರ್ ಅಂಕಣ
ಈಗ ಹೆಜ್ಜೆ ಹೆಜ್ಜೆಗೂ ನಿಯಂತ್ರಣ ಹೇರುತ್ತಿದ್ದ ಗಂಡನಿಲ್ಲ. ಹೆಂಡತಿಗೆ ಕಟ್ಟು ಪಾಡು ಹೇರುವವರಿಲ್ಲ, ಆಕೆ ಮಗಳ ಜೊತೆ ಶಾಶ್ವತವಾಗಿ ತನ್ನ ತವರು ಸೇರಿದ್ದಾರೆ. ಈಗ ಹೀಗೆ ಇರು ಹಾಗೆ ಇರು ಎಂದು ಹೇಳುವವರಿಲ್ಲ. ಆಕೆ ಹೇಗೆ ಬೇಕಾದರೂ ಇರಬಹುದು. ಗಂಡನಿಲ್ಲದ ನೋವಿದೆ ಆದರೀಗ ಉಸಿರುಗಟ್ಟುತ್ತಿಲ್ಲ. ಇಷ್ಟಕ್ಕೇಕೆ ಆತ ಅಷ್ಟೆಲ್ಲಾ ಹೆಂಡತಿಯನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಿತ್ತು. ಆತನಿಗೆ ಒಂದು ದಿನ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಇದ್ದಕ್ಕಿದ್ದ ಹಾಗೆ ಅನಾಥನಾಗಿ ಹೊರಟು ಬಿಡಬೇಕು ಎಂಬ ಅರಿವಿದ್ದರೆ ನಿಜಕ್ಕೂ ಆತ ಹಾಗೆಲ್ಲ ಮಾಡುತ್ತಿದ್ದರ?
ಮಾಲತಿ ಶಶಿಧರ್ ಬರೆಯುವ ಅಂಕಣ “ಹೊಳೆವ ನದಿ”
