Advertisement

Tag: ಕನ್ನಡದ ಕತೆ

ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ

“ಈ ಘಟನೆಯಲ್ಲಿ ತಪ್ಪು ಅಂತ ಏನಾದರೂ ಇದ್ರೆ ಅದು ಒಬ್ಬರ ಖಾಸಗಿತನದ ಪರಿಧಿ ದಾಟಿ ನುಗ್ಗಿ ವಿಡಿಯೋ ಮಾಡಿದವರದ್ದು. ಅದು ನೈತಿಕವಾಗಿ ಅಷ್ಟೆ ಅಲ್ಲ ಕಾನೂನಾತ್ಮಕವಾಗಿಯೂ ತಪ್ಪು ಹಾಗೂ ಅಪರಾಧ. ಹೀಗಿದ್ದೂ ತಪ್ಪು ಮಾಡದೇ ಇರವವರೊಬ್ಬರನ್ನ ಪಿಜಿಯಿಂದ ಹೊರಗೆ ಹಾಕ್ತಿವಿ ಅಂತ ಬೆಂಕಿಗೆ ದೂಡಿದ್ದು ಆ ವಾರ್ಡನ್ ತಪ್ಪು. ಆ್ಯಕ್ಚುಲಿ ನಿಜ ಹೇಳಬೇಕೆಂದರೆ ಇವರು ನಮ್ಮ ನಿಮ್ಮ ಕೋಪಕ್ಕೆ ಅರ್ಹರು.”
ಚಂದ್ರಶೇಖರ್‌ ಡಿ. ಆರ್.‌ ಬರೆದ ಈ ಭಾನುವಾರದ ಕತೆ “ಪ್ರೈವೆಸಿ” ನಿಮ್ಮ ಓದಿಗೆ

Read More

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

Read More

ಮುದಿರಾಜ್‌ ಬಾಣದ್ ಬರೆದ ಈ ಭಾನುವಾರದ ಕತೆ

ಬಿದ್ದಿದ್ದ ಜಡೆಗುಂಡು ರಿಬ್ಬನ್‌ ತಗಂಡು ನೀಲೇಶ್‌ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್‌ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್‌ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ.
ಮುದಿರಾಜ್‌ ಬಾಣದ್‌ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ

ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ