Advertisement
ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ಪ್ರಿಯ ಅತಿಥಿ

ಹೇಳುವುದಿಲ್ಲ ಕೇಳುವುದಿಲ್ಲ
ಠಕ್ಕ *ರಾನ್ಸಮ್‌ವೇರಿನ ಹಾಗೆ ಕಳ್ಳ ಹೆಜ್ಜೆಯಲ್ಲಿ
ಬಾಗಿಲು ಬಡಿಯದೆ ಒಳಗೆ ಬಂದು ಕೂತುಬಿಡುತ್ತಾನೆ

ಒಳ ಬಂದು ಸೀದಾ ಧಡಲ್ ಎಂದು
ಮಲ್ಲಿಗೆ ಸಸಿ ಹೊತ್ತ ಎದೆ ಕುಂಡವನ್ನೇ ಒಡೆಯುತ್ತಾನೆ
ಆಮೇಲೆ ಸುಳ್ಳು ಸುಳ್ಳೇ ಸಂತೈಸುವಂತೆ ಮಾಡಿ
ಕುಂಡವನ್ನು ಜೋಡಿಸಿಟ್ಟಂತೆ ಮಾಡಿ
ನಾಲ್ಕೂ ಕೊಣೆಗಳೊಳಗೆ ಹೊಕ್ಕು ತಾನೇ
ಕೂತು ಬಿಡುತ್ತಾನೆ ಈ ಕಳ್ಳ ಅತಿಥಿ

ಒಂದು ಕೋಣೆಯಲ್ಲಿ ಓದುತ್ತಾ
ಇನ್ನೊಂದರಲ್ಲಿ ಹಾಡುತ್ತ
ಮತ್ತೊಂದರಲ್ಲಿ ಕುಣಿದು ಕುಪ್ಪಳಿಸಿ
ಮಗದೊಂದರಲಿ ಉಂಡು ಮಲಗುವವ

ಎದ್ದು ಹೋಗುವ ಸೊಲ್ಲೇ ಎತ್ತದವ
ರಾತ್ರಿ ಟ್ರೈನಿಗೆ ಟಿಕೆಟು ತೆಗೆಸಿ ಕೊಟ್ಟರೂ
ಊಹೂಂ ಸುತರಾಂ ಹೋಗಲು ಮುಂದಾಗದವ
ಹೂವೊಂದು ಚಿವುಟುವ ಆ ಕೈಗಳು
ಪರಿಮಳವಂಟಿದ ಪ್ರೇಮ ಪತ್ರವೊಂದನ್ನು
ನನ್ನೆಡೆಗೆ ಟಪಾಲು ಎಸೆದವು

ಬೆಂಬಿಡದೆ ಕಾಡುವ ಅತಿಥಿಯ
ದಸ್ಕತ್ತು ಪತ್ರದ ಕೊನೆಯಲ್ಲಿ

ಇಂತಿ ನಿನ್ನ ಪ್ರೀತಿಯ
“ದುಗುಡ”

*ರಾನ್ಸಮ್‌ವೇರ್ ಎಂದರೆ ಹ್ಯಾಕರುಗಳು ಕಂಪ್ಯೂಟರ್ ಅಥವಾ ಡೇಟಾವನ್ನು ಲಾಕ್ ಮಾಡಿ, ಅದನ್ನು ಬಿಡುಗಡೆ ಮಾಡಲು ಹಣ(ಫಾಯಿದೆ) ಬೇಡುವ ಒಂದು ಖದೀಮ ಸಾಫ್ಟವೇರ್.

About The Author

ಚೈತ್ರಾ ಶಿವಯೋಗಿಮಠ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ "ಪೆಟ್ರಿಕೋರ್"(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ